2
Bantwala: ಫೆ.25 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದ ದಿಗಂತ್ ಇದೀಗ ಮನೆ ಸೇರಿದ್ದಾನೆ ಎನ್ನಲಾಗಿದೆ. ಇಂದು ಸಂಜೆ ತಾಯಿಯ ಮನೆಗೆ ಕಳುಹಿಸಿ ಕೊಡಲಾಗಿದೆ ಎಂದು ವರದಿಯಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯು ಆತನ ಹೇಳಿಕೆಯನ್ನು ಪಡೆದು ಆತ ಮನೆಗೆ ಹೋಗುವುದಕ್ಕೆ ಒಪ್ಪಿದ ನೀಡಿದ ಬಳಿಕ ಆತನನ್ನು ಮನೆಗೆ ಕಳುಹಿಸಿ ಕೊಡಲಾಗಿರುವ ಕುರಿತು ವರದಿಯಾಗಿದೆ. ಫರಂಗಿಪೇಟೆಯ ಕಿದೆಬೆಟ್ಟಿನ ಮನೆಗೆ ಆತನನ್ನು ಕರೆದುಕೊಂಡು ಬರಲಾಗಿದೆಯೇ ಅಥವಾ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದಾರೆಯೇ ಈ ಕುರಿತು ಮಾಹಿತಿ ಲಭ್ಯವಾಗಿಲ್ಲ.
ದಿಗಂತ್ ಪೋಷಕರು ಬೊಂದೆಲ್ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿರುವ ದಿಗಂತ್‌ನನ್ನು ತಮ್ಮ ವಶಕ್ಕೆ ನೀಡಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
