Dinesh Gundu Rao: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿದ್ದ ಅನುಮಾನಾಸ್ಪದ ಸಾವುಗಳ ತನಿಖೆಗೆ ಎಸ್‌ಐಟಿ ರಚನೆ ಆಗಬೇಕು ಎನ್ನುವ ಒತ್ತಾಯದಲ್ಲಿ ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ಹೂತು ಹಾಕಿರುವ ಸ್ಥಳಗಳಲ್ಲಿ ಸಿಗುವ ಮೃತದೇಹಗಳ ಅವಶೇಷಗಳ ಆಧಾರದ ಮೇಲೆಯೇ ತನಿಖೆ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನೂರಾರು ಹತ್ಯೆ ಆಗಿದ್ದರೆ ದೊಡ್ಡ ವಿಷಯ ಆಗುತ್ತದೆ. ಹೀಗಾಗಿ ತನಿಖೆಗೆ ಆದೇಶ ಮಾಡಿದ್ದು, ತನಿಖೆಗೆ ಮೊದಲೇ ಯಾರೋ ಒಬ್ಬರ ತೇಜೋವಧೆ ಮಾಡುವುದು, ಕೆಟ್ಟ ಹೆಸರು ತರುವ ಕೆಲಸ ಮಾಡಬಾರದು. ಎಲ್ಲವೂ ತನಿಖೆ ಮೂಲಕ ತಿಳಿದು ಬರಲಿದೆ. ಇದರ ಹಿಂದೆ ಯಾರೇ ಇದ್ದರೂ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಭಾನುವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ದಕ್ಷಿಣ ಕನ್ನಡ ಪೊಲೀಸರು ಈ ಕುರಿತು ತನಿಖೆಗೆ ಮಾಡುತ್ತಿದ್ದರು. ಆದರೆ ಅನುಮಾನಾಸ್ಪದ ಸಾವುಗಳ ತನಿಖೆಗೆ ಎಸ್‌ಐಟಿ ರಚನೆ ಆಗಬೇಕು ಎನ್ನುವ ಒತ್ತಡಗಳು ಇದ್ದವು. ಹೀಗಾಗಿ ಎಸ್‌ಐಟಿ ರಚನೆಯಾಗಿದೆ ಎಂದು ಅವರು ಹೇಳಿದರು.
