Froude Case: ಮೋಸ ಹೋಗುವವರು ಇರೋವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಆದರೆ ಸ್ವಲ್ಪ ತಿಳಿದಿರೋ, ಸಮಾಜದಲ್ಲಿ ಎಲ್ಲರಿಗೂ ತಿಳಿದಿರೋ ವ್ಯಕ್ತಿಗಳಿಗೂ ಮೋಸ ಮಾಡುತ್ತಾರಲ್ಲಾ. ಅದು ಹೆಂಗೆ ಧೈರ್ಯ ಬರುತ್ತೆ ಅಂತ. ಖ್ಯಾ ತ ಚಿತ್ರ ನಿರ್ದೇಶಕನಿಗೆ ಎಮ್ಮೆ ಕೊಡಿಸುವುದಾಗಿ ಹಣ ಪಡೆದು ಅತ್ತ ಎಮ್ಮೆನೂ ಕೊಡದೆ ಇತ್ತ ಹಣನೂ ವಂಚನೆ ಮಾಡಿ ಅಸ್ಸಾಮಿ ಪರಾರಿಯಾಗಿದ್ದಾನೆ. ಇದೀಗ ಈ ಆರೋಪಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಖ್ಯಾತ ನಟಿ ರಕ್ಷಿತ ಅವರ ಗಂಡ ಖ್ಯಾತ ನಿರ್ದೇಶಕ ಪ್ರೇಮ್ ಅವರಿಗೆ ಎರಡು ಎಮ್ಮೆ ಕೊಡ್ತಿನಿ ಎಂದು 4.5 ಲಕ್ಷ ಹಣ ಪಡೆದು ಆರೋಪಿ ವಂಚನೆ ಮಾಡಿದ್ದಾನೆ. ಇದೀಗ ತಮ್ಮ ಮ್ಯಾನೇಜರ್ ಮೂಲಕ ನಿರ್ದೇಶಕ ಪ್ರೇಮ್ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುಜರಾತ್ ಮೂಲದ ವನರಾಜ್ ಭಾಯ್ ಎಂಬಾತನ ಮೇಲೆ ದೂರು ದಾಖಲಿಸಲಾಗಿದೆ.
ಹೈನುಗಾರಿಕೆ ಮಾಡಲು ಎರಡು ಎಮ್ಮೆ ಖರೀದಿಗೆ ಮುಂದಾಗಿದ್ದ ಪ್ರೇಮ್ ಅವರಿಗೆ, ವನರಾಜ್ ಬಾಯ್ ಎಂಬಾತನಿಗೆ ಎಮ್ಮೆ ಖರೀದಿಗೆ ಮುಂಗಡ 25 ಸಾವಿರ ನೀಡಲಾಗಿತ್ತು. ವನರಾಜ್, ವಾಟ್ಸಪ್ ಮೂಲಕ ಎರಡು ಎಮ್ಮೆಗಳ ವಿಡೀಯೋ ಕಳಿಸಿದ್ದ. ಈ ಹಿನ್ನಲೆ ಎಮ್ಮೆ ಬರುತ್ತೆ ಎಂದು ನಂಬಿ ನಾಲ್ಕೂವರೆ ಲಕ್ಷ ಹಣವನ್ನೂ ಆಮೇಲೆ ಹಂತ ಹಂತವಾಗಿ ಆನ್ ಲೈನ್ ಮೂಲಕ ಪ್ರೇಮ್ ನೀಡಿದ್ದರು. ಕೊನೆಗೆ ಎಮ್ಮೆ ನೀಡದೇ ಇತ್ತ ಹಣವೂ ನೀಡದೆ ವಂಚನೆ ಮಾಡಿ ಆರೋಪಿ ದೋಖಾ ಮಾಡಿದ್ದಾನೆ.
ಒಂದು ವಾರದಲ್ಲಿ ಎಮ್ಮೆ ಕೊಡ್ತಿನಿ ಎಂದವನು ಹಣದೊಂದಿಗೆ ಪರಾರಿ ಆಗಿದ್ದು, ಸದ್ಯ ಮೊಬೈಲ್ ಸ್ಚಿಚ್ ಆಫ್ ಮಾಡಿಕೊಂಡಿರುವ ಆರೋಪದಲ್ಲಿ ದೂರು ದಾಖಲಿಸಲಾಗಿದೆ. ತನಗೆ ಎಮ್ಮೆ ನೀಡದೆ ವಂಚನೆ ಮಾಡಿದ್ದಾನೆಂದು ಪ್ರೇಮ್ ಪೊಲೀಸ್ ಠಾಣೆಗೆ ಅವರ ಮ್ಯಾನೇಜರ್ ಕಂ ನಟ ದಶಾವರ ಚಂದ್ರು ಎಂಬುವವರ ಮೂಲಕ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Robot: ರೋಬೋಟ್‌ನಿಂದಲೇ ಮಗುವಿನ ಜನನ: ಜಗತ್ತಿನ ಮೊದಲ ಕೃತಕ ಗರ್ಭಧಾರಣೆಗೆ ರೆಡಿಯಾದ ಚೀನಾ!
