Home » Munawar Faruqui: ಹಿಂದೂ ಭಾವನೆಗೆ ಧಕ್ಕೆ; ಬಿಗ್‌ಬಾಸ್‌ ವಿನ್ನರ್ ಮುನಾವರ್‌ ಫಾರೂಖಿ ವಿರುದ್ಧ ಪ್ರಕರಣ

Munawar Faruqui: ಹಿಂದೂ ಭಾವನೆಗೆ ಧಕ್ಕೆ; ಬಿಗ್‌ಬಾಸ್‌ ವಿನ್ನರ್ ಮುನಾವರ್‌ ಫಾರೂಖಿ ವಿರುದ್ಧ ಪ್ರಕರಣ

0 comments

Munawar Faruqui: ಯೂಟ್ಯೂಬರ್‌ ರಣವೀರ್‌ ಅಲಹಾಬಾದಿಯಾ ವಿವಾದದ ಬೆನ್ನಲ್ಲೇ ಬಿಗ್‌ಬಾಸ್‌ ಸೀಸನ್‌ 17 ರ ವಿನ್ನರ್‌ ಮುನ್ನಾವರ್‌ ಫಾರೂಖಿ ಅವರ ʼಹಫ್ತಾ ವಸೂಲಿʼ ಒಟಿಟಿ ಶೋ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿ ಬಂದಿರುವ ಕಾರಣ ಪ್ರಕರಣ ದಾಖಲಾಗಿದೆ.

ಇಂಡಿಯಾಸ್‌ ಗಾಟ್‌ ಲೇಟೆಂಟ್‌ ಕಾರ್ಯಕ್ರಮದಲ್ಲಿ ಪೋಷಕರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಯೂಟ್ಯೂಬರ್‌ ರಣವೀರ್‌ ಅಲಹಾಬಾದಿಯಾ ಹಾಗೂ ಆಶಿಷ್‌ ಚಂಚಲಾನಿ ಮಹಾರಾಷ್ಟ್ರದ ಸೈಬರ್‌ ಎದುರು ಹಾಜರಾಗಿದ್ದು, ಐದು ಗಂಟೆಗಳ ಕಾಲ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗಿದೆ.

ಮುನವ್ವರ್ ಫಾರೂಕಿ ವಿರುದ್ಧ ವಕೀಲ ಅಮಿತಾ ಸಚ್‌ದೇವ್ ನವದೆಹಲಿ ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದಾರೆ. ಸಚ್‌ದೇವ್ ಅವರು ಹೇಳಿರುವ ಪ್ರಕಾರ, ಹಾಸ್ಯನಟ ಅಶ್ಲೀಲತೆಯನ್ನು ಹರಡುತ್ತಿದ್ದಾರೆ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದರ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಸಮಾಜ ಮತ್ತು ಯುವ ಮನಸ್ಸುಗಳನ್ನು ಕಲುಷಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

 

 

You may also like