Home » ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಾಧಾನಗೊಂಡ ಸಚಿವರು|ತವರು ಜಿಲ್ಲೆಯದ್ದೇ ಉಸ್ತುವಾರಿ ನೀಡುವಂತೆ ಬೊಮ್ಮಾಯಿಗೆ ಒತ್ತಾಯ|ಉಸ್ತುವಾರಿ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ-ಸಿ.ಎಂ

ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಾಧಾನಗೊಂಡ ಸಚಿವರು|ತವರು ಜಿಲ್ಲೆಯದ್ದೇ ಉಸ್ತುವಾರಿ ನೀಡುವಂತೆ ಬೊಮ್ಮಾಯಿಗೆ ಒತ್ತಾಯ|ಉಸ್ತುವಾರಿ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ-ಸಿ.ಎಂ

0 comments

ಬೆಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ‌ ಪ್ರಕಟವಾದ ಬೆನ್ನಲ್ಲೇ, ಕೆಲವೊಂದು ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ತವರು ಜಿಲ್ಲೆಯ ಉಸ್ತುವಾರಿ ನೀಡುವಂತೆ ಸಚಿವರು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಸಮೀಪಿಸುತ್ತಿರುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆದೇಶ ಹೊರಬಂದಿದ್ದು, ಎಲ್ಲಾ ಸಚಿವರಿಗೂ ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿತ್ತು.

ತವರು ಜಿಲ್ಲೆಯದ್ದೇ ಉಸ್ತುವಾರಿ ನೀಡುವಂತೆ ಕೆಲವೊಂದು ಸಚಿವರುಗಳು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಚಿವರಾದ ನಾರಾಯಣ ಗೌಡ, ಕೆ ಎಸ್ ಈಶ್ವರಪ್ಪ, ಶಿವರಾಂ ಹೆಬ್ಬಾರ್, ಪ್ರಭು ಚವ್ಹಾಣ್ ಸೇರಿದಂತೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಉಸ್ತುವಾರಿ ಪಟ್ಟಿ ಬದಲಾವಣೆ ಸಾದ್ಯವೇ ಇಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

You may also like

Leave a Comment