Home » ಮದುವೆ ಡಿ.ಜೆ.ಹಾಡಿಗೆ ಕುಣಿಯುತ್ತಿದ್ದ ಯುವಕ ದಿಢೀರ್ ಕುಸಿದು ಬಿದ್ದು ಸಾವು

ಮದುವೆ ಡಿ.ಜೆ.ಹಾಡಿಗೆ ಕುಣಿಯುತ್ತಿದ್ದ ಯುವಕ ದಿಢೀರ್ ಕುಸಿದು ಬಿದ್ದು ಸಾವು

by Praveen Chennavara
0 comments

ಮಧ್ಯಪ್ರದೇಶ: ವಿವಾಹ ಸಂಭ್ರಮದ ನಡುವೆ ಡ್ಯಾನ್ಸ್ ಮಾಡುತ್ತಿದ್ದ ವರನ ಸಂಬಂಧಿಯೊಬ್ಬ ಇದ್ದಕ್ಕಿದ್ದಂತೆ ಕುಸಿದುಬಿದ್ದು ಮೃತಪಟ್ಟ ಘಟನೆ ಮದ್ಯಪ್ರದೇಶದ ಬೇತುಲ್ ಎಂಬಲ್ಲಿ ನಡೆದಿದೆ.

ಡಿ.ಜೆ.ಹಾಡಿಗೆ ತಕ್ಕಂತೆ ಸಂತೋಷದಿಂದ ನರ್ತಿಸುತ್ತಿದ್ದಂತೆ ಈತ ದಿಢೀರ್ ಎಂದು ಮೃತಪಟ್ಟಿದ್ದಾನೆ.

ಆತ ಕುಸಿದು ಬೀಳುವ ವೀಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಆತ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆಯೇ ಆತ ಕುಸಿದುಬಿದ್ದಿದ್ದಾನೆ. ಆಗ ಅಲ್ಲಿದ್ದವರು ಅದನ್ನು ತಮಾಷೆ ಮಾಡೋದು ಎಂದುಕೊಂಡಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಆತ ಮೇಲೇಳದಿದ್ದಾಗ ಹತ್ತಿರ ಬಂದು ನೋಡಿದಾಗ ಆತನ ಉಸಿರೇ ನಿಂತು ಹೋಗಿತ್ತು.

ತಕ್ಷಣ ಆತನನ್ನು ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ವೈದ್ಯರ ಪ್ರಕಾರ, ಆ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

You may also like

Leave a Comment