Home » Kapu: ವಿಶೇಷ ಸಂಖ್ಯೆಯಿಂದ ಕಾಪು ಮಾರಿಯಮ್ಮನಿಗೆ ದೇಣಿಗೆ ನೀಡಿದ ಡಿಕೆಶಿ!!

Kapu: ವಿಶೇಷ ಸಂಖ್ಯೆಯಿಂದ ಕಾಪು ಮಾರಿಯಮ್ಮನಿಗೆ ದೇಣಿಗೆ ನೀಡಿದ ಡಿಕೆಶಿ!!

0 comments

Kapu: ಕರಾವಳಿ ಭಾಗದ ಪುಣ್ಯಕ್ಷೇತ್ರಗಳ ಪೈಕಿ ಕಾಪು(Kapu)ವಿನ ಮಾರಿಗುಡಿ ಕೂಡ ಒಂದು. ಇದೀಗ ಹೊಸ ಗುಡಿಯಲ್ಲಿ ತಾಯಿ ಮಾರಿಕಾಂಬೆ ವಿರಾಜಮಾನಾಗಿದ್ದಾಳೆ. ನಾಡಿನ ಅನೇಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಂತೆಯೇ ಇದೀಗ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾಪುವಿನ ಹೊಸ ಮಾರಿಗುಡಿಗೆ ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ವಿಶೇಷ ಸಂಖ್ಯೆಯಿಂದ ಪಾಪು ಅಮ್ಮನಿಗೆ ದೇಣಿಗೆಯನ್ನು ಕೂಡ ನೀಡಿದ್ದಾರೆ.

ಹೌದು, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಿದ್ದಾರೆ. ಈ ವೇಳೆ ತಮ್ಮ ಪತ್ನಿ ಹೆಸರಿನಲ್ಲಿ ದೇವಸ್ಥಾನಕ್ಕೆ ₹9,99,999 ದೇಣಿಗೆ ನೀಡಿದರು.

ಯಾವ ಧರ್ಮದಲ್ಲೂ ಯಾರಿಗೂ ತೊಂದರೆ ಕೊಡಬೇಕೆಂದು ಇಲ್ಲ. ನಮ್ಮ ಧರ್ಮವನ್ನ ನಾವು ಕಾಪಾಡಬೇಕು. ಎಲ್ಲಾ ಕಾರ್ಯಕ್ರಮ ಮುಗಿದ ಮೇಲೆ ಮತ್ತೆ ಕ್ಷೇತ್ರಕ್ಕೆ ಫ್ಯಾಮಿಲಿ ಜೊತೆ ಬರುತ್ತೇನೆ ಎಂದು ಡಿಸಿಎಂ ಹೇಳಿದರು.

You may also like