Home » DK Shivakumar: ಹಾಸನಾಂಬೆ ದೇವಾಲಯದಲ್ಲಿ ಡಿಕೆಶಿ ಪ್ರಾರ್ಥನೆ ವೇಳೆ ಹೂ ಮೂಲಕ ವರ ನೀಡಿದ ದೇವಿ

DK Shivakumar: ಹಾಸನಾಂಬೆ ದೇವಾಲಯದಲ್ಲಿ ಡಿಕೆಶಿ ಪ್ರಾರ್ಥನೆ ವೇಳೆ ಹೂ ಮೂಲಕ ವರ ನೀಡಿದ ದೇವಿ

0 comments

DK Shivakumar: ಡಿಸಿಎಂ ಡಿಕೆ ಶಿವಕುಮಾರ್‌ ಹಾಸನಾಂಬೆ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಾಸನಾಂಬೆ ಹೂ ಮೂಲಕ ವರ ನೀಡಿದೆ. ಹೂ ಎರಡು ಬಾರಿ ಬಲಕ್ಕೆ ಬಿದ್ದಿದೆ.

ಹಾಸನಾಂಬೆ ದೇವಾಲಯದಲ್ಲಿ ಡಿಕೆ ಶಿವಕುಮಾರ್‌ ಶತ್ರುಗಳ ಮೇಲೆ ವಿಜಯದ ಸಂಕೇತವಾಗಿ ವಿಶೇಷ ಪೂಜೆ ಮಾಡಿದ್ದಾರೆ. ಶಕ್ತಿಯುತವಾದ ಖಡ್ಗಮಾಲಾ ಸ್ತ್ರೋತ್ರ ಪಠಿಸಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಪ್ರಸಾದದ ರೂಪದಲ್ಲಿ ಹೂವು ಬಲಕ್ಕೆ ಬಿದ್ದಿದೆ.

ಜ್ಯೋತಿರ್ಮಯಿ ಜಗನ್ಮಾತಃ, ಮಾಯಾರೂಪಧಾರಿಣಿ।
ಹಾಸನಾಂಬೇ ನಮಸ್ತೇ ಅಸ್ತು, ನಿತ್ಯಂ ಮಮ ರಕ್ಷಯ॥

ಹಾಸನದ ಅಧಿದೇವತೆ ಹಾಗೂ ಶಕ್ತಿ ಪೀಠಗಳಲ್ಲಿ ಒಂದಾದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ತಾಯಿ ಹಾಸನಾಂಬೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರ ಜೊತೆಗೆ ಹಲವು ಪವಾಡಗಳನ್ನು ಮಾಡುವ ಮೂಲಕ ಭಕ್ತರ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾಳೆ. ತಾಯಿ ಸನ್ನಿಧಿಯಲ್ಲಿ ನಾಡನ್ನು ಸಮೃದ್ಧವಾಗಿರಿಸು ಎಂದು ಪ್ರಾರ್ಥನೆ ಸಲ್ಲಿಸಿದೆ ಎಂದು ಡಿಸಿಎಂ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

 

You may also like