D K Shivkumar :ಕರ್ನಾಟಕ ಮುಖ್ಯಮಂತ್ರಿ(Karnataka CM) ಸ್ಥಾನ ತನಗೆ ಬೇಕೇ ಬೇಕೆಂದು ಪಟ್ಟು ಹಿಡಿದು ಕೂತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(D K Shivkumar) ಅವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ಉಪಮುಖ್ಯಮಂತ್ರಿ(DCM) ಸ್ಥಾನ ಸ್ವೀಕರಿಸಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಇದೀಗ ಅವರು ತಾನೇಕೆ ಸಿಎಂ ಸ್ಥಾನ ತ್ಯಾಗ ಮಾಡಿದೆ ಅನ್ನೋ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಹೌದು, ಕೆಲವೇ ದಿನಗಳ ಹಿಂದಷ್ಟೇ ಕರ್ನಾಟಕದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಸದ್ಯ ಆಡಳಿತ ನಡೆಸುತ್ತಿದೆ. ಆದರೆ ಈ ಸರ್ಕಾರ ಅಷ್ಟು ಸುಲಭದಲ್ಲಿ ರಚನೆಯಾಗಲಿಲ್ಲ. ಮುಖ್ಯಮಂತ್ರಿ ತಾನಾಗಬೇಕು, ನಾನಾಗಬೇಕೆಂದು ಕಾಂಗ್ರೆಸ್ ನ ಇಬ್ಬರು ಘಟಾನುಘಟಿಗಳಾದ ಸಿದ್ದರಾಮಯ್ಯ(Siddaramaiah) ಹಾಗೂ ಡಿ ಕೆ ಶಿವಕುಮಾರ್ ಇಬ್ಬರೂ ಕೂಡ ದೆಹಲಿಯಲ್ಲಿ ಟಿಕಾಣಿ ಹೂಡಿದ್ದರು. ಅಂತೂ ಕೊನೆಗೂ ಕನಕ ಪುರುದ ಬಂಡೆ ತನ್ನ ಆಕಾಂಕ್ಷಿಯ ಸ್ಥಾನವನ್ನು ಬಿಟ್ಟುಕೂಟ್ಟಿದ್ದಾರೆ. ಆದರೀಗ ತಾನೇಕೆ ಸಿಎಂ ಸ್ಥಾನ ತ್ಯಾಗ ಮಾಡಿದೆ ಅನ್ನೋ ಕಾರಣವನ್ನು ಡಿಕೆಶಿ ಬಿಚ್ಚಿಟ್ಟಿದ್ದಾರೆ.
ತಮ್ಮ ಸ್ಥಾನ ತ್ಯಾಗದ ಹಿನ್ನೆಲೆ ಕುರಿತು ಮಾತನಾಡಿರುವ ಅವರು, ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್(Congress) ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರ ಸಲಹೆಯಂತೆ ನಾನು ತಾಳ್ಮೆಯಿಂದ ಉಳಿಯಲು ನಿರ್ಧರಿಸಿ, ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ.
ಸರ್ಕಾರ ರಚನೆಯಾಗಿ, ಉಪಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಡಿಕೆಶಿ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರು ಮತದಾರರಿಗೆ ತಮ್ಮನ್ನು ಮುಖ್ಯಮಂತ್ರಿಯಾಗಿ ನೋಡುವ ಆಸೆ ಎಂದಿಗೂ ಸುಳ್ಳಾಗುವುದಿಲ್ಲ, ಆದರೆ ತಾಳ್ಮೆಯಿಂದ ಕಾಯುವಂತೆ ಹೇಳಿದರು. ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನೀವು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ನೀಡಿದ್ದೀರಿ, ಆದರೆ ಏನಾಗಬೇಕು ಅದೇ ಆಗುತ್ತದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಸಲಹೆ ನೀಡಿದ್ದಾರೆ. ಹಿರಿಯರ ಮಾತಿಗೆ ತಲೆ ಬಾಗಬೇಕಾಗಿತ್ತು ಎಂದು ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಬಗ್ಗೆ ಹೇಳಿದ್ದಾರೆ.
ಅಲ್ಲದೆ ನಾನು ನಿಮಗೆ ಧನ್ಯವಾದ ಹೇಳಿ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದರು. ಇದರೊಂದಿಗೆ ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗುವಂತೆ ತಮ್ಮ ಅನುಯಾಯಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಇದೆ ವೇಳೆ ಸೂಚಿಸಿದರು.
ಇದನ್ನೂ ಓದಿ : ಮನೆಯಲ್ಲಿ ಮೀನನ್ನು ಸಾಕೋದ್ರಿಂದ ಇಷ್ಟೆಲ್ಲಾ ಲಾಭಗಳಿದ್ಯಾ
