Home » DK Shivkumar : ಡಿಕೆಶಿಯನ್ನು ಸಿಎಂ ಮಾಡದಿದ್ದರೆ ರಾಜೀನಾಮೆ ಕೊಡ್ತೇವೆ – ಒಕ್ಕಲಿಗ ಶಾಸಕರಿಂದ ಬೆದರಿಕೆ

DK Shivkumar : ಡಿಕೆಶಿಯನ್ನು ಸಿಎಂ ಮಾಡದಿದ್ದರೆ ರಾಜೀನಾಮೆ ಕೊಡ್ತೇವೆ – ಒಕ್ಕಲಿಗ ಶಾಸಕರಿಂದ ಬೆದರಿಕೆ

0 comments
Dk shivakumar

D K Shivkumar : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಸಿಎಂ ಕುರ್ಚಿಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌‍ ಹೈಕಮಾಂಡ್‌ ಕರ್ನಾಟಕದ ಕುರ್ಚಿ ಕದನದ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡಿದ್ದರಿಂದಾಗಿ, ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದ್ದು ಸಮುದಾಯವಾರು ಶಾಸಕರ ರಾಜೀನಾಮೆಯ ಬೆದರಿಕೆಗಳು ಕೇಳಿ ಬಂದಿವೆ.

ಹೌದು, ಇದ್ದರೆ, ಒಕ್ಕಲಿಗ ಸಮುದಾಯದ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯದಿಂದ ಒಂದು ವೋಟು ಕೂಡ ಕಾಂಗ್ರೆಸ್‌‍ಗೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಇತ್ತ ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ಸಂಘಟನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದು, ನಾಯಕತ್ವ ಬದಲಾವಣೆ ಮಾಡಿದರೆ, ಅಹಿಂದ ವರ್ಗದ 80ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಪರಿಸ್ಥಿತಿ ದಿನದಿಂದ ಗಂಭೀರ ಸ್ವರೂಪಕ್ಕೆ ತಿರುಗುತ್ತಿದೆ. ಕಳೆದ ನಾಲ್ಕೈದು ತಿಂಗಳಿನಿಂದ ನಾಯಕತ್ವ ಬದಲಾವಣೆ ವಿಚಾರವಾಗಿ ಮುಸುಕಿನ ಗುದ್ದಾಟ ನಡೆದೇ ಇದೆ. ಆದರೆ ಹೈಕಮಾಂಡ್‌ ಕಾಂಗ್ರೆಸ್‌‍ ಪಕ್ಷಕ್ಕೆ ಸ್ಪಷ್ಟ ಬಹುಮತ ಇದೆ. ಯಾರು ಏನೂ ಮಾಡಿಕೊಳ್ಳಲಾಗುವುದಿಲ್ಲ ಎಂಬ ಉಡಾಫೆಯಲ್ಲಿ ಭಿನ್ನ ರಾಗಗಳನ್ನು ಕಡೆಗಣಿಸಿತು ಎಂದು ಹೇಳಲಾಗಿದೆ.

You may also like