Home » ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ

ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ

by Praveen Chennavara
0 comments

ಮಂಗಳೂರು : ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ.

ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಅ. 30ರಂದು ನಡೆದ ಕಂಬಳ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ನಾರಾವಿ ರಕ್ಷಿತ್ ಜೈನ್, ಉಪಾಧ್ಯಕ್ಷರಾಗಿ ಹೊಕ್ಕಾಡಿಗೋಳಿ ರಶ್ಮಿತ್ ಶೆಟ್ಟಿ, ಪುತ್ತೂರು ಚಂದ್ರಹಾಸ ಶೆಟ್ಟಿ, ಬೆಳ್ಳಿಪಾಡಿ ಕೈಪಾ ಕೇಶವ ಭಂಡಾರಿ, ಜಪ್ಪು ಮನ್ನುತೋಟ ಗುತ್ತು ಅನಿಲ್ ಶೆಟ್ಟಿ, ಕೊಳಕೆ ಇರ್ವತ್ತೂರು ಉದಯ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಮೂಡುಬಿದಿರೆ ನ್ಯೂ ಪಡಿವಾಲ್ಸ್ ಹರ್ಷವರ್ಧನ್ ಪಡಿವಾಲ್ ಆಯ್ಕೆಯಾದರು.
ಓಟಗಾರರ ಪರವಾಗಿ- ಕೊಳಕೆ ಇರ್ವತ್ತೂರು ಆನಂದ್, ಜೊತೆ ಕಾರ್ಯದರ್ಶಿಯಾಗಿ ಸುದೇಶ್ ಕುಮಾರ್ ಆರಿಗ, ಸಿದ್ಧಕಟ್ಟೆ ಸಂದೀಪ್ ಶೆಟ್ಟಿ, ಕೌಡೂರು ಬೀಡು ಯತೀಶ್ ಭಂಡಾರಿ, ಸರಪಾಡಿ ಧನಂಜಯ ಶೆಟ್ಟಿ ಹಾಗೂ ಕಾನೂನು ಸಲಹೆಗಾರರಾಗಿ ಇರುವೈಲ್ ದೊಡ್ಡಗುತ್ತು ಜಗದೀಶ್ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.

You may also like

Leave a Comment