Home » Dogs Chasing: ಬೈಕ್, ಕಾರಿನಲ್ಲಿ ಹೋಗುವಾಗ ನಾಯಿಗಳು ಬೆನ್ನಟ್ಟುತ್ತವೆಯೇ ? ಅದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಯಾರು ತಿಳಿಯದ ಇಂಟ್ರೆಸ್ಟಿಂಗ್ ಮ್ಯಾಟರ್

Dogs Chasing: ಬೈಕ್, ಕಾರಿನಲ್ಲಿ ಹೋಗುವಾಗ ನಾಯಿಗಳು ಬೆನ್ನಟ್ಟುತ್ತವೆಯೇ ? ಅದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಯಾರು ತಿಳಿಯದ ಇಂಟ್ರೆಸ್ಟಿಂಗ್ ಮ್ಯಾಟರ್

8 comments

Dogs Chasing:ಬೈಕ್ ಅಥವಾ ಕಾರಿನಲ್ಲಿ ಹೋಗುವಾಗ ನಾಯಿಗಳು ನಿಮ್ಮನ್ನು ಹಿಂಬಾಲಿಸಿವೆಯೇ?(Dogs Chasing) ಕೆಲವೊಮ್ಮೆ ನಾಯಿಗಳು ನಿಮ್ಮ ಹಿಂದೆ ತುಂಬಾ ಕೋಪದಿಂದ ಬರುವಾಗ ಹೆದರಿ ವಾಹನದ ಸಮತೋಲನ ಕಳೆದುಕೊಳ್ಳುವ ಸಂದರ್ಭಗಳಿವೆ. ಕೆಲವರು ವಾಹನದಿಂದ ಕೆಳಗೆ ಸಹ ಬಿದ್ದಿದ್ದಾರೆ. ಹಾಗಿದ್ರೆ ಅವು ಏಕೆ ಬೆನ್ನಟ್ಟುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮ್ಯಾಟರ್.

ವಾಹನಗಳ ಟೈರ್ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡುವುದನ್ನು ನೀವು ಆಗಾಗ ನೋಡುತ್ತಿರುತ್ತೀರಿ. ಆ ಸ್ಥಳ ತಮ್ಮದು ಎಂದು ಇತರ ನಾಯಿಗಳಿಗೆ ತಿಳಿಸಲು ಮೂತ್ರ ವಿಸರ್ಜನೆ ಮಾಡುತ್ತವೆ. ನಿಮ್ಮ ಕಾರು ಒಂದು ಪ್ರದೇಶಕ್ಕೆ ಚಲಿಸಿದಾಗ ಇತರ ನಾಯಿಗಳು ಟೈರ್‌ನಲ್ಲಿನ ಮೂತ್ರದ ವಾಸನೆ ಗ್ರಹಿಸುತ್ತವೆ. ಈ ಕಾರಣದಿಂದಾಗಿ, ಬೇರೆ ನಾಯಿಗಳು ತಮ್ಮ ಪ್ರದೇಶವನ್ನು ಪ್ರವೇಶಿಸಿವೆ ಎಂದು ಭಾವಿಸುತ್ತವೆ.

ಹೌದು, ನಾಯಿಯ ಮೂಗುಗಳು ಮಾನವ ಮೂಗುಗಳಿಗಿಂತ ಬಹಳ ಭಿನ್ನವಾಗಿವೆ. ಇವು ದೂರದಿಂದಲೂ ಯಾವುದೇ ವಾಸನೆಯನ್ನು ಗ್ರಹಿಸುತ್ತವೆ. ನಿಮ್ಮ ಕಾರು ಅಥವಾ ಬೈಕ್​​ ವಿವಿಧ ಸ್ಥಳಗಳಲ್ಲಿ ಚಲಿಸಿದಾಗ, ಇತರ ನಾಯಿಗಳು ನಿಮ್ಮ ವಾಹನಗಳ ಮೇಲೆ ಮೂತ್ರ ವಿಸರ್ಜನೆ ಮಾಡಿರಬಹುದು. ಅದರ ವಾಸನೆ ಕಾರಿನಲ್ಲಿ ಹಾಗೇ ಇರುತ್ತದೆ. ನಾಯಿಗಳು ಆ ವಾಸನೆಯನ್ನು ಗುರುತಿಸುತ್ತವೆ ಮತ್ತು ಮತ್ತೊಂದು ನಾಯಿ ತಮ್ಮ ಪ್ರದೇಶವನ್ನು ಪ್ರವೇಶಿಸಿದೆ ಎಂದು ಅರ್ಥಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ ನಿಮ್ಮ ಕಾರನ್ನು ಬೆನ್ನತ್ತಿ ಬೊಗಳುತ್ತವೆ.

ಇಷ್ಟೇ ಅಲ್ಲದೆ ನಾಯಿಗಳ ಮೇಲೆ ವಿಜ್ಞಾನಿಗಳು ನಡೆಸಿದ ಕೆಲವು ಅಧ್ಯಯನಗಳ ಪ್ರಕಾರ, ನಾಯಿಗಳು ಕೆಲವೊಮ್ಮೆ ಜಾಲಿ ಮೂಡ್‌ನಲ್ಲಿದ್ದರೂ ವಾಹನಗಳನ್ನು ಹಿಂಬಾಲಿಸಬಹುದು. ನಾಯಿಗಳು ಒಂಟಿತನ ಅನುಭವಿಸಿದಾಗ ಸಮಯವನ್ನು ಕಳೆಯಲು ವಾಹನಗಳನ್ನು ಬೆನ್ನಟ್ಟುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಬೇಸರ ಹೋಗಲಾಡಿಸಿ ಖುಷಿಯಾಗಿರುತ್ತವೆ. ನಾಯಿಗಳು ವಾಹನಗಳನ್ನು ಹಿಂಬಾಲಿಸಲು ಮತ್ತೊಂದು ಪ್ರಮುಖ ಕಾರಣವೆಂದರೆ ಅವುಗಳಿಗೆ ವಾಹನಗಳಿಂದ ಬರುವ ದೊಡ್ಡ ಶಬ್ದಗಳು ಇಷ್ಟವಾಗುವುದಿಲ್ಲ. ವಾಹನಗಳು ಕರ್ಕಶ ಶಬ್ದ ಮಾಡುತ್ತಾ ಸಂಚರಿಸಿದರೆ ಆ ಶಬ್ಧಗಳಿಗೆ ನಾಯಿಗಳು ಹೆದರುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

You may also like

Leave a Comment