Home » Bengaluru: ಆರ್ ಸಿ ಬಿ ವಿಜಯೋತ್ಸವಕ್ಕೆ ಖರ್ಚು ವೆಚ್ಚ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ?!

Bengaluru: ಆರ್ ಸಿ ಬಿ ವಿಜಯೋತ್ಸವಕ್ಕೆ ಖರ್ಚು ವೆಚ್ಚ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ?!

0 comments

Bengaluru: ಸತತ 18 ವರ್ಷಗಳ ನಿರೀಕ್ಷೆಯ ನಂತರ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Bengaluru) (ಆರ್‌ಸಿಬಿ) ತಂಡದ ವಿಜಯೋತ್ಸವವನ್ನು ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಈ ವಿಜಯೋತ್ಸವಕ್ಕೆ ಬರೋಬ್ಬರಿ ಸುಮಾರು 15 ಕೋಟಿ ರೂಪಾಯಿ ಖರ್ಚಾಗಿರುವುದು ಮೂಲಗಳಿಂದ ತಿಳಿದು ಬಂದಿದೆ. ಆದ್ರೆ ಅಸ್ತವ್ಯಸ್ತತೆಯಿಂದ 11 ಜನರು ಕಾಲ್ತುಳಿತದಲ್ಲಿ ಮೃತಪಟ್ಟಿರುವುದು ವಿವಾದಗಳನ್ನು ಉಂಟುಮಾಡಿದೆ.

ವಿಜಯೋತ್ಸವದ ಆಯೋಜನೆಯನ್ನು ಡಿಎನ್‌ಎ ಎಂಟರ್ಟೈನ್ಮಂಟ್ ನೆಟ್ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ವಹಿಸಿಕೊಂಡಿತ್ತು. ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲು ಡಿಎನ್‌ಎ ಸಂಸ್ಥೆ ವಿಫಲವಾದುದರಿಂದ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತ ಸಂಭವಿಸಿತು. ಇದರ ಪರಿಣಾಮವಾಗಿ 11 ಜನರು ಪ್ರಾಣವನ್ನು ಕಳೆದುಕೊಂಡರು. ಈ ಘಟನೆಯ ನಂತರ, ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸೆಲ್, ಡಿಎನ್ಎ ಸಂಸ್ಥೆಯ ಸಿಬ್ಬಂದಿ ಸುನಿಲ್ ಮ್ಯಾಥ್ಯ, ಕಿರಣ್ ಮತ್ತು ಸುಮಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಆರ್‌ಸಿಬಿ ಮ್ಯಾನೇಜೆಂಟ್ ಮತ್ತು ಡಿಎನ್ಎ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಸಾರ್ವಜನಿಕರಲ್ಲಿ ಈ ಘಟನೆ ಬಗ್ಗೆ ಕೋಪ ಮತ್ತು ದುಃಖ ವ್ಯಕ್ತವಾಗಿದೆ. ಸರ್ಕಾರವು ಘಟನೆಯ ತನಿಖೆ ಮಾಡಿ ಜವಾಬ್ದಾರರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

You may also like