Home » Warning social media: ಸೋಷಿಯಲ್‌ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್, ಕಾಮೆಂಟ್ ಮಾಡಬೇಡಿ : ಪೊಲೀಸರಿಂದ ಕಠಿಣ ಕ್ರಮದ ಎಚ್ಚರಿಕೆ

Warning social media: ಸೋಷಿಯಲ್‌ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್, ಕಾಮೆಂಟ್ ಮಾಡಬೇಡಿ : ಪೊಲೀಸರಿಂದ ಕಠಿಣ ಕ್ರಮದ ಎಚ್ಚರಿಕೆ

0 comments

Warning social media: ಸೋಷಿಯಲ್ ಮೀಡಿಯಾ ಬಳಕೆದಾರರಿಕೆ ಕರ್ನಾಟಕ ಪೊಲೀಸ್ ಇಲಾಖೆ ಖಡಕ್‌ ಎಚ್ಚರಿಕೆಯ ಸಂದೇಶ ನೀಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕ ಸಿಕ್ಕ ಪೋಸ್ಟ್‌ ಹಾಕೋದು, ಯಾರೋ ಹಾಕಿದ ಪೋಸ್ಟ್‌ಗೆ ತನ್ನದು ಒಂದು ಇರಲಿ ಎಂದು ಕಮೆಂಟ್‌ ಹಾಕುವ ಮುನ್ನ ಎಚ್ಚರ ವಹಿಸಿ. ಯಾವುದೇ ಸಂಘಟನೆ ಅಥವಾ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಸೋಷಿಯಲ್‌ ಮೀಡಿಯಾಗಳಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪೋಸ್ಟ್, ಕಾಮೆಂಟ್ ಪ್ರಕಟಿಸಿದರೆ ಶಿಕ್ಷೆ ಗ್ಯಾರಂಟಿ.

ಇಂಥಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇನ್ನು ಮುಂದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಪೊಲೀಸ್‌ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಬಗ್ಗೆ ಸಂದೇಶ ನೀಡಲಾಗಿದ್ದು, ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಬಳಕೆದಾರರಿಂದ ಅಂತಹ ಚಟುವಟಿಕೆಗಳು ಪುನರಾವರ್ತನೆಯಾದರೆ ಕಠಿಣ ಕ್ರಮಕ್ಕೆ ದಾರಿಯಾಗಬಹುದು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ, ಸಂಸ್ಥೆಗಳ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಹಾಕುವುದು ಸರ್ವೆ ಸಾಮಾನ್ಯವಾಗಿದೆ. ಪೊಲೀಸರಿಗೆ ಇದೇ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕೆಟ್ಟ ಕೆಟ್ಟ ಕಮೆಂಟ್‌ ಹಾಕಿ ಆಮೇಲೆ ಕೇಸ್ ಹಾಕಿಸಿಕೊಂಡು ಪೊಲೀಸರಿಂದ ಬಂಧನಕ್ಕೊಳಗಾದ ಪ್ರಸಂಗಳು ಇದ್ದಾವೆ. ಇತ್ತೀಚೆಗೆ ಚಿತ್ರನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿರನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಿಂದಿಸಿದ್ದಾಗಿ ಅನೇಕರು ಈಗ ಪೊಲೀಸರಿಂದ ಬಂಧಿಸಲ್ಪಟ್ಟರು.

ಇತ್ತೀಚೆಗೆ ಧರ್ಮಸ್ಥಳ ಪ್ರಕರಣ ಬೆಳಕಿಗೆ ಬಂದ ಮೇಲಂತೂ ಸೋಷಿಯಲ್‌ ಮೀಡಿಯಾಗಳದ್ದೇ ಕಾರುಬಾರು. ಇಲ್ಲಿ ಅವರವರಿಗೆ ಬಾಕಾದ ಹಾಗೆ ಕಮೆಂಟ್‌, ಪೋಸ್ಟ್‌ಗಳನ್ನು ಹಾಕಿಕೊಂಡು ಒಬ್ಬರ ಮೇಲೊಬ್ಬರು ತೇಜೋವಧೆಗೆ ಇಳಿದಿದ್ದಾರೆ. ಜೊತೆಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರನ್ನು ನಿಂದಿಸುವುದನ್ನು ಕೆಟ್ಟ ಚಾಳಿಯನ್ನಾಗಿ ಮಾಡಿಕೊಂಡಿದ್ದಾರೆ. ಅಂಥವರಿಗೆ ಪೊಲೀಸ್ ಇಲಾಖೆ ಈಗ ಎಚ್ಚರಿಕೆಯ ಸಂದೇಶ ನೀಡಿದ್ದು, ಕಠಿಣ ಖ್ರಮದ ಎಚ್ಚರಿಕೆ ನೀಡಿದೆ.

Rohit Sharma: ಸುಮಾರು 20 ಕೆಜಿ ತೂಕ ಇಳಿಸಿಕೊಂಡ ರೋಹಿತ್ ಶರ್ಮಾ; ಮೊದಲು-ನಂತರದ ಫೋಟೋಗಳು ಬೆಳಕಿಗೆ

You may also like