Home » Ratan Tata: ರತನ್ ಟಾಟಾ ನಿರ್ಮಿಸಿದ್ದ ಒಂದೇ ಒಂದು ಬಾಲಿವುಡ್ ಸಿನಿಮಾ ಬಗ್ಗೆ ನಿಮಗೆ ಗೊತ್ತಾ?! ಅಮಿತಾ ಬಚ್ಚನ್ ಗೂ ಶಾಕ್ ಕೊಟ್ಟ ಚಿತ್ರ ಅದು!

Ratan Tata: ರತನ್ ಟಾಟಾ ನಿರ್ಮಿಸಿದ್ದ ಒಂದೇ ಒಂದು ಬಾಲಿವುಡ್ ಸಿನಿಮಾ ಬಗ್ಗೆ ನಿಮಗೆ ಗೊತ್ತಾ?! ಅಮಿತಾ ಬಚ್ಚನ್ ಗೂ ಶಾಕ್ ಕೊಟ್ಟ ಚಿತ್ರ ಅದು!

0 comments

Ratan Tata: ರತನ್ ಟಾಟಾ (Ratan Tata) ಭಾರತದ ಖ್ಯಾತ ಮತ್ತು ಯಶಸ್ವಿ ಉದ್ಯಮಿ ಆಗಿರುವುದು ಗೊತ್ತೇ ಇದೆ. ಆದ್ರೆ ಸಿನಿಮಾ ವಿಷ್ಯದಲ್ಲಿ ಇದು ತಲೆಕೆಳಗಾಗಿದೆ ಹೌದು, ಒಮ್ಮೆ ಅವರು ಬಾಲಿವುಡ್ ಚಿತ್ರವನ್ನೂ ನಿರ್ಮಿಸಿ ಸೋಲು ಒಪ್ಪಿಕೊಂಡಿದ್ದಾರೆ.

ಬಹುತೇಕ ಎಲ್ಲ ರಂಗದಲ್ಲೂ ಉದ್ಯಮಿ ರತನ್ ಟಾಟಾ ಪರಿಪೂರ್ಣತೆ ಸಾಧಿಸಿದ ಅಸಾಧಾರಣ ವ್ಯಕ್ತಿ. ಅದರಂತೆ ಅವರು ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದರು. ಆದ್ರೆ ಅವರು ನಿರ್ಮಿಸಿದ ಮೊದಲ ಚಿತ್ರವೇ ಅವರ ಕೊನೆಯ ಚಿತ್ರವೂ ಆಗಿತ್ತು. ಯಾಕೆಂದರೆ ಸಿನಿಮಾ ವಿಷ್ಯದಲ್ಲಿ ಅವರ ಯೋಜನೆಗಳು ಯಾವುದು ಕೂಡಾ ಸಫಲವಾಗಿಲ್ಲ.

ಆ ಸಿನಿಮಾ ಬಗ್ಗೆ ಹೇಳುವುದಾದರೆ, ಉದ್ಯಮಿ ರತನ್ ನಿರ್ಮಿಸಿದ ಮೊದಲ ಮತ್ತು ಏಕೈಕ ಚಿತ್ರ ‘ಏತ್‌ಬಾರ್’. ಟಾಟಾ ಇನ್ಫೋಮೀಡಿಯಾದ ಬ್ಯಾನರ್ ಅಡಿಯಲ್ಲಿ, 2004 ರಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಈ ಚಿತ್ರಕ್ಕಾಗಿ ರತನ್ ಟಾಟಾ ದೊಡ್ಡ ಪ್ರಮಾಣದಲ್ಲೇ ಇನ್ವೆಸ್ಟ್ ಮಾಡಿದ್ರು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್, ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಅವರಂತಹ ದೊಡ್ಡ ತಾರೆಯರು ನಟಿಸಿದ್ದರು. ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ರೋಮ್ಯಾಂಟಿಕ್- ಸೈಕಲಾಜಿಕಲ್ ಮಿಕ್ಸ್ ಆಗಿತ್ತು. ಆದ್ರೆ ಎಷ್ಟೇ ದೊಡ್ಡ ತಾರೆಯರಿದ್ದರೂ ರತನ್ ಟಾಟಾ ನಿರ್ಮಿಸಿದ್ದ ಈ ಚಿತ್ರ ಪ್ರೇಕ್ಷಕರ ಮನ ಸೆಳೆಯಲು ವಿಫಲವಾಗಿ ಭಾರಿ ನಷ್ಟ ಕಂಡಿತ್ತು.

ಸುಮಾರು 10 ಕೋಟಿ ಹೊಡಿಕೆ ಮಾಡಿ ತಯಾರಿಸಿದ್ದ ಚಿತ್ರವು ಭಾರತದಲ್ಲಿ ಒಟ್ಟು ರೂ 4.25 ಕೋಟಿ ಗಳಿಕೆ ಮಾಡಿದೆ ಎಂದು ಕೆಲ ವರದಿಗಳು ಹೇಳಿದ್ದವು. ಆದರೆ ವಿಶ್ವಾದ್ಯಂತ ಏತ್ಬಾರ್ ಕೇವಲ ರೂ 7.96 ಕೋಟಿಗಳಷ್ಟು ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ತಜ್ಞರು ಹೇಳಿದ್ದಾರೆ.

You may also like

Leave a Comment