Home » Ranu Mandal: ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮಂಡಲ್ ಈಗ ಹೇಗಿದ್ದಾರೆ ಗೊತ್ತಾ? ಅಂದು ರೈಲ್ವೇ ನಿಲ್ದಣದಲ್ಲಿ, ಇಂದು ಮನೆಯಲ್ಲಿ ಭಿಕ್ಷಾಟನೆ !

Ranu Mandal: ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮಂಡಲ್ ಈಗ ಹೇಗಿದ್ದಾರೆ ಗೊತ್ತಾ? ಅಂದು ರೈಲ್ವೇ ನಿಲ್ದಣದಲ್ಲಿ, ಇಂದು ಮನೆಯಲ್ಲಿ ಭಿಕ್ಷಾಟನೆ !

0 comments

Ranu Mandal: ರಾನು ಮಂಡಲ್(Ranu Mandal) ಎಂಬ ಈ ಹೆಸರು ನಿಮಗೆ ನೆನಪಿರಬಹುದು, ರಾತ್ರೋರಾತ್ರಿ ಸ್ಟಾರ್ ಆದ ಈ ಮಹಿಳೆ ಈಗ ಕಣ್ಮರೆಯಾಗಿರಬಹುದು, ಆದರೆ ಈಕೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಲೇ ಇರುತ್ತವೆ. ರಾತ್ರೋರಾತ್ರಿ ಸ್ಟಾರ್ ಆದವರಲ್ಲಿ ಗಾಯಕಿ ರಾನು ಮಂಡಲ್ ಸಹ ಒಬ್ಬರು. ಪಶ್ಚಿಮ ಬಂಗಾಳದ(West Bengal) ರೈಲ್ವೆ ನಿಲ್ದಾಣದಲ್ಲಿ ಹಿಂದಿ ಹಾಡು ಹೇಳುತ್ತಾ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಒಂದು ವಿಡಿಯೋದಿಂದ ಫೇಮಸ್ ಆದವರು. ಬಳಿಕ ಬಾಲಿವುಡ್ ಗಾಯಕ ಮತ್ತು ಸಂಗೀತ ಸಂಯೋಜಕ ಹಿಮೇಶ್ ಅವರ ಚಿತ್ರಗಳಲ್ಲಿ ಹಾಡಲು ಅವಕಾಶ ನೀಡಿದರು. ಆದಾಗ್ಯೂ, ಅವಳು ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಶೀಘ್ರದಲ್ಲೇ ಅವಳು ತನ್ನ ಖ್ಯಾತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದಳು ಮತ್ತು ಕ್ರಮೇಣ ಅವಳು ಮತ್ತೆ ಮರೆಗೆ ಹೋದಳು.

 

ಆದರೀಗ ಅಚ್ಚರಿ ಎಂಬಂತೆ ಬೆಳಗಾಗುವಷ್ಟರಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ರಾನು ಮಂಡನ್ ಮತ್ತೆ ತೆರೆಯ ಹಿಂದೆ ಸರಿದಿದ್ದಾರೆ. ಅವಕಾಶಗಳು ಸಿಗದ ಹಿನ್ನೆಲೆ ಮುಂಬೈನಲ್ಲಿದ್ದ ರಾನು, ಮತ್ತೆ ಕೋಲ್ಕತ್ತಾ ಸೇರಿಕೊಂಡಿದ್ದಾರೆ. ಹೌದು, ಹಿಮೇಶ್ ರಶ್ಮಿಯಾ ಅವಕಾಶ ನೀಡಿದ ರಾನು ಮಂಡಲ್‌ಗೆ ಕೆಲವು ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶಗಳು ಸಿಗಲಾರಂಭಿಸಿದವು. ಹಾಗಾಗಿ ಕೋಲ್ಕತ್ತಾದಿಂದ ಬಂದು ಮುಂಬೈನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಉಳಿದುಕೊಂಡಿದ್ದರು. ಕಾಲನಂತರ ಅವಕಾಶಗಳು ಕಡಿಮೆಯಾದಾಗ ಬಾಡಿಗೆ ಹಣ ಕಟ್ಟಲು ಸಾಧ್ಯವಾಗದಿದ್ದಾಗ ಮತ್ತೆ ಕೋಲ್ಕತ್ತಾ ಸೇರಿಕೊಂಡಿದ್ದರು.

 

ಈಗ ಕೋಲ್ಕತ್ತಾದ ಹೊರವಲಯದಲ್ಲಿರುವ ಪುಟ್ಟ ಮನೆಯಲ್ಲಿ ವಾಸವಾಗಿರುವ ರಾನು ಮಂಡಲ್, ತಮ್ಮ ಭೇಟಿಗೆ ಬರುವ ಜನರ ಬಳಿ ವಿಚಿತ್ರ ಬೇಡಿಕೆಗಳನ್ನು ಇರಿಸುತ್ತಿದ್ದಾರೆ ಎಂದು ವ್ಲಾಗರ್ ಹೇಳಿದ್ದಾರೆ. ವ್ಲಾಗರ್‌ ತಮ್ಮ ವಿಡಿಯೋದಲ್ಲಿ ಸದ್ಯ ರಾನು ಮಂಡಲ್ ಹೇಗಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

 

ಅದೇನೆಂದರೆ ಯಾವುದೇ ಕಾರ್ಯಕ್ರಮಗಳು ಸಿಗದ ಹಿನ್ನೆಲೆ ಜೀವನ ನಡೆಸಲು ರಾನು ಕಷ್ಟಪಡ್ತಿದ್ದಾರೆ. ಈ ವಿಷಯ ತಿಳಿದು ಕೆಲವರು ಆಹಾರ ನೀಡುತ್ತಾರೆ. ಕೆಲವೊಮ್ಮೆ ಇಡೀ ದಿನ ಆಹಾರವಿಲ್ಲದೇ ರಾನು ಉಪವಾಸ ಇರುತ್ತಾರಂತೆ. ಹೀಗಾಗಿ ತಮ್ಮ ಭೇಟಿಗೆ ಬರುವ ಜನರಿಗೆ ರಾನು ಮಂಡಲ್ ಊಟ ಮತ್ತು ಆಹಾರ ಸಾಮಾಗ್ರಿ ತಂದುಕೊಡುವಂತೆ ಕೇಳುತ್ತಾರೆ. ಇದರ ಜೊತೆಗೆ ಸಿಹಿ ತಿನಿಸು, ಬಟ್ಟೆ, ದಿನನಿತ್ಯ ಬಳಕೆಗೆ ಬೇಕಾಗುವ ವಸ್ತುಗಳು ತನಗೆ ಬೇಕೆಂದು ಕೇಳುತ್ತಾರೆ. ಒಂದು ವೇಳೆ ತಂದು ಕೊಡಲು ಒಪ್ಪದಿದ್ದರೆ ಪೊರಕೆ ಹಿಡಿದು ಹೊಡೆಯಲು ರಾನು ಮಂಡಲ್ ಬರುತ್ತಾರೆ. ಈ ಕಾರಣದಿಂದ ರಾನು ಭೇಟಿಗೆ ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆಯಂತೆ!!

You may also like

Leave a Comment