Home » Abdu Rozik marriage: ಕೋಟ್ಯಧಿಪತಿ ಬಿಗ್‌ಬಾಸ್‌ ಖ್ಯಾತಿ ಅಬ್ದು ಮದುವೆಯಂತೆ! ಅದೃಷ್ಟವಂತ ಹುಡುಗಿ ಯಾರು ಗೊತ್ತೇ?

Abdu Rozik marriage: ಕೋಟ್ಯಧಿಪತಿ ಬಿಗ್‌ಬಾಸ್‌ ಖ್ಯಾತಿ ಅಬ್ದು ಮದುವೆಯಂತೆ! ಅದೃಷ್ಟವಂತ ಹುಡುಗಿ ಯಾರು ಗೊತ್ತೇ?

1 comment
Abdu Rozik marriage

Abdu Rozik marriage: ಅಬ್ದು ಅಂತಾನೇ ಫೇಮಸ್‌ ಆಗಿರುವ, ನೋಡಲು ಕುಳ್ಳಗಿರುವ ಬಿಗ್ ಬಾಸ್ ಸೀಸನ್‌ 16 ಖ್ಯಾತಿಯ ಅಬ್ದು ರೋಜಿಕ್ ಮದುವೆ ಆಗುತ್ತಿದ್ದಾರಂತೆ. ಸುಮಾರು 20 ವರ್ಷದ ಅಬ್ದು ರೋಜಿಕ್ ನೋಡಲು ಚಿಕ್ಕ ಹುಡುಗನಂತೆ ಕಾಣುತ್ತಾರೆ.

ಇದನ್ನೂ ಓದಿ: Preta Maduve: ‘ಪ್ರೇತ ಮದುವೆ’ಗೆ ವರ ಬೇಕೆಂದು ಜಾಹಿರಾತು ಪ್ರಕಟ – ಬಂತು 50ಕ್ಕೂ ಹೆಚ್ಚು ಪ್ರತಿಕ್ರಿಯೆ!!

ತಜಿಕಿಸ್ತಾನ್ ದೇಶದ ಈ ಗಾಯಕ ಈಗಾಗಲೇ ಕೋಟ್ಯಧಿಪತಿ ಆಗಿದ್ದು, ಸಖತ್‌ ಜನಪ್ರಿತೆ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಆಗಿರುವ ಈತ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ 8 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ಅಬ್ದು ರೋಜಿಕ್ ಮದುವೆ ಆಗುತ್ತಿರುವ ವಿಚಾರ ಹೊರ ಬಿದ್ದಿದ್ದು, ಅಬ್ದು ಕೈ ಹಿಡಿಯುವ ಅದೃಷ್ಟವಂತ ಹುಡುಗಿ ಯಾರು ಅಂತಾ ನೋಡೋಣ ಬನ್ನಿ.

ಇದನ್ನೂ ಓದಿ: Bengaluru: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ, ವೀಡಿಯೋ ವೈರಲ್!

ಮದುವೆ ಬಗ್ಗೆ ಸ್ವತಃ ಅಬ್ದು ರೋಜಿಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.’ ಗೆಳೆಯರೇ.. ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸುವ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಇದೀಗ ಈ ಖುಷಿಯನ್ನು ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್ಪ್ರೈಸ್ ಇದೆ’ ಎಂದಿರುವ ಅಬ್ದು ರಿಂಗ್ ಓಪನ್ ಮಾಡಿ ತೋರಿಸಿದ್ದಾರೆ.

ಅಲ್ಲದೇ ಜುಲೈ 7ರ ದಿನಾಂಕವನ್ನು ಸೇವ್‌ ಮಾಡಿಕೊಳ್ಳಿ ಎಂದಿರುವ ಅಬ್ದು ರೋಜಿಕ್ ನನ್ನ ಈ ಖುಷಿಯನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ತಮ್ಮ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ. ಅಂದಹಾಗೆ ಅಬ್ದು ರೋಜಿಕ್, ಶಾರ್ಜಾದ ಅಮಿರಾ ಎಂಬ 19 ವರ್ಷದ ಯುವತಿಯನ್ನು ವಿವಾಹ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಅಬ್ದು ವಿಡಿಯೋ ಶೇರ್‌ ಮಾಡಿದ್ದೇ ತಡ, ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಶುಭಾಶಯದ ಮಹಾಪೂರವೇ ಅಬ್ದುಗೆ ಹರಿದು ಬಂದಿದೆ.

You may also like

Leave a Comment