SIM Card: ಹಣ ಕೊಟ್ಟು ಎಷ್ಟೇ ದುಬಾರಿಯ ಮೊಬೈಲನ್ನು ಕೊಂಡರು ಕೂಡ ಅದು ಸಿಮ್ ಕಾರ್ಡ್ ಇಲ್ಲದೆ ವರ್ಕ್ ಆಗುವುದಿಲ್ಲ. ವೈಫೈ ಬಳಸಿಕೊಂಡು ನಾನು ಯೂಸ್ ಮಾಡುತ್ತೇನೆ ಎಂದರು ಕೂಡ ಸಿಮ್ ಕಾರ್ಡ್ ಮೊಬೈಲಿನ ಹಾರ್ಟ್ ಇದ್ದಂತೆ. ಆದರೆ ಸಿಮ್ ಕಾರ್ಡ್ ಒಂದು ಮೂಲೆಯಿಂದ ಏಕೆ ಕಟ್ ಆಗಿರುತ್ತದೆ ಎಂದು ಯೋಚಿಸಿದ್ದೀರಾ..? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ.
ಮೊದಲು, ಸಿಮ್ ಕಾರ್ಡ್ ವಿನ್ಯಾಸ ಹೀಗಿರಲಿಲ್ಲ. ಮೊಬೈಲ್ ಫೋನ್‌ಗಳ ಆರಂಭಿಕ ದಿನಗಳಲ್ಲಿ, ಸಿಮ್ ಕಾರ್ಡ್‌ಗಳು ಚೌಕಾಕಾರದಲ್ಲಿ ಬರುತ್ತಿದ್ದವು. ಆ ಸಮಯದಲ್ಲಿ, ಮೊಬೈಲ್‌ಗೆ ಸಿಮ್ ಕಾರ್ಡ್ ಅನ್ನು ಯಾವ ದಿಕ್ಕಿನಲ್ಲಿ ಸೇರಿಸಬೇಕೆಂದು ಅರ್ಥಮಾಡಿಕೊಳ್ಳುವುದು ಅನೇಕ ಜನರಿಗೆ ಕಷ್ಟಕರವಾಗಿತ್ತು. ಅನೇಕ ಬಾರಿ ಜನರು ಸಿಮ್ ಕಾರ್ಡ್ ಅನ್ನು ತಲೆಕೆಳಗಾಗಿ ಅಥವಾ ತಪ್ಪು ದಿಕ್ಕಿನಲ್ಲಿ ಮೊಬೈಲ್‌ಗೆ ಸೇರಿಸಲು ಪ್ರಯತ್ನಿಸುತ್ತಾರೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಟೆಲಿಕಾಂ ಕಂಪನಿಗಳು ಮತ್ತು ಮೊಬೈಲ್ ಆಪರೇಟರ್‌ಗಳು ಸಿಮ್ ಕಾರ್ಡ್ ಅನ್ನು ಸರಿಯಾದ ದಿಕ್ಕಿನಲ್ಲಿ ಸೇರಿಸಲು ಸುಲಭವಾಗುವಂತೆ ಅದರ ವಿನ್ಯಾಸವನ್ನು ಬದಲಾಯಿಸಲು ನಿರ್ಧರಿಸಿದರು.
ಹಾಗೆ ಕಟ್ ಮಾಡಲು ಆರಂಭಿಸಿದ ನಂತರ ಸಿಮ್ ಕಾರ್ಡ್‌ಗಳ ವಿನ್ಯಾಸದಲ್ಲಿ ನಿಧಾನವಾಗಿ ಇನ್ನೂ ಕೆಲ ಬದಲಾವಣೆಗಳು ಆಗುತ್ತಿವೆ. ಈ ಹಿಂದೆ ಸಿಮ್ ಗಾತ್ರ ದೊಡ್ಡದಾಗಿತ್ತು. ಅದು ಈಗ ಅದು ತುಂಬಾ ಚಿಕ್ಕದಾಗಿ, ಕ್ಯೂಟ್ ಆಗಿದೆ ಎಂಬುದು ನೀವೂ ಗಮನಿಸಿರುತ್ತೀರಿ. ಏಕೆಂದರೆ ಈಗ ಬರುತ್ತಿರುವ ಮೊಬೈಲುಗಳಲ್ಲಿ ಸಣ್ಣ ಸಿಮ್ ಅನ್ನು ಮಾತ್ರ ಹೊಂದಿರುವಂತೆ ಸ್ಲಾಟ್ ಮಾಡಲಾಗುತ್ತಿದೆ. ಸಿಮ್ಹಾ ಹಳೆಯ ದೊಡ್ಡ ಗಾತ್ರದ ಪ್ಲೇಟ್ ಅನ್ನು ಒದಗಿಸಿದ್ದರೂ, ಟೆಲಿಕಾಂ ಕಂಪನಿಗಳು ಹಳೆಯ ಫೋನ್‌ನಲ್ಲಿ ಸಿಮ್ ಸೇರಿಸಲು ಮತ್ತೊಂದು ಸಿಮ್ ಕಾರ್ಡ್‌ನ ಫ್ರೇಮ್ ಅನ್ನು ಸೇರಿಸಲು ಮತ್ತು ಬಳಸಲು ಯೋಜಿಸಿವೆ.
