Home » Mobile Data: ರಾತ್ರಿ ಮಲಗುವ ಮುನ್ನ ಮೊಬೈಲ್ ಡೇಟಾ ಆಫ್ ಮಾಡದೆ ಮಲಗ್ತೀರಾ? ಇದು ಎಷ್ಟು ಡೇಂಜರ್ ಎಂಬುದು 99% ಜನರಿಗೆ ಗೊತ್ತಿಲ್ಲ

Mobile Data: ರಾತ್ರಿ ಮಲಗುವ ಮುನ್ನ ಮೊಬೈಲ್ ಡೇಟಾ ಆಫ್ ಮಾಡದೆ ಮಲಗ್ತೀರಾ? ಇದು ಎಷ್ಟು ಡೇಂಜರ್ ಎಂಬುದು 99% ಜನರಿಗೆ ಗೊತ್ತಿಲ್ಲ

0 comments

Mobile Data: ಇಂದಿನ ಜೀವನದಲ್ಲಿ ಮೊಬೈಲ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅಷ್ಟೇ ಅಲ್ಲ ಅದರಲ್ಲಿರುವ ಇಂಟರ್ನೆಟ್ ನಮ್ಮ ಉಸಿರಾಗಿ ಬಿಟ್ಟಿದೆ. ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲ ಅಂದರೆ ಜೀವವೇ ಹೋದಂತೆ ಪರಿತಪಿಸುವವರು ಇದ್ದಾರೆ. ಇಷ್ಟೆಲ್ಲಾ ಅಡಿಕ್ಟ್ ಆಗಿರುವ ಅನೇಕರಿಗೆ ರಾತ್ರಿ ಮಲಗುವ ವೇಳೆ ಇಂಟರ್ನೆಟ್ ಆಫ್ ಮಾಡಿ ಮಲಗಬೇಕು ಎಂಬುದು ತಿಳಿದೇ ಇಲ್ಲ. ಇದರಿಂದ ಅನೇಕ ಅಪಾಯಗಳಿವೆ ಎಂಬ ಎಚ್ಚರಿಕೆ ಅವರ ಯಾರಿಗೂ ಇಲ್ಲ. ಹಾಗಾದ್ರೆ ನೈಟ್ ಮಲಗುವಾಗ ಮೊಬೈಲ್ ಡಾಟಾವನ್ನು ಆನ್ ಆಗಿದ್ದರೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಗೊತ್ತಾ?

ಹ್ಯಾಕರ್ಸ್ ಗಳಿಗೆ ಅನುಕೂಲ: 

ನಿಮ್ಮ ಫೋನ್‌ನ ಇಂಟರ್ನೆಟ್ ಸಂಪರ್ಕ ರಾತ್ರಿ ಇಡೀ (ಡೇಟಾ ಅಥವಾ Wi-Fi) ಆನ್‌ನಲ್ಲಿದ್ದರೆ, ಹಲವಾರು ಬ್ಯಾಕ್‌ಗ್ರೌಂಡ್ ಅಪ್ಲಿಕೇಶನ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಇದು ನಿಮ್ಮ ಗೌಪ್ಯತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ರಾತ್ರಿಯಲ್ಲಿ ಮೊಬೈಲ್ ಡೇಟಾ ಆನ್ ಆಗಿರುವಾಗ, ಅದು ನಿಮ್ಮ ಸಾಧನವನ್ನು ಮಾಲ್‌ವೇರ್, ವೈರಸ್‌ಗಳು ಮತ್ತು ಹ್ಯಾಕರ್‌ಗಳಿಗೆ ಗುರಿಯಾಗಿಸುತ್ತದೆ, ಅವರು ನಿಮ್ಮ ಫೋನ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಇತ್ತೀಚಿನ ವರದಿಗಳ ಪ್ರಕಾರ, ಕೆಲವು ಅಪ್ಲಿಕೇಶನ್‌ಗಳು ಅನಗತ್ಯವಾಗಿ ಮೈಕ್ರೊಫೋನ್, ಲೊಕೇಶನ್ ಮತ್ತು ಇತರ ಡೇಟಾವನ್ನು ಪ್ರವೇಶಿಸಿ ಟ್ರ್ಯಾಕಿಂಗ್ ಮಾಡುವ ಸಾಧ್ಯತೆ ಇದೆ. ಹ್ಯಾಕರ್‌ಗಳಿಗೆ ಸದಾ ಇಂಟರ್ನೆಟ್‌ಗೆ ಕನೆಕ್ಟ್ ಆಗಿರುವ ಫೋನ್ ಒಂದು ಸುಲಭದ ಗುರಿಯಾಗಬಲ್ಲದು.

ವೈಯಕ್ತಿಕ ಮಾಹಿತಿ ಟ್ರ್ಯಾಕಿಂಗ್ ಸಮಸ್ಯೆ: 

ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವಾಗ, ನಿಮ್ಮ ಸಾಧನವು ನಿರಂತರವಾಗಿ ಡೇಟಾವನ್ನು ಕಳುಹಿಸುತ್ತಿರುತ್ತದೆ ಮತ್ತು ಸ್ವೀಕರಿಸುತ್ತಿರುತ್ತದೆ, ಇದನ್ನು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು, ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಬಳಸಬಹುದು.

ಬ್ಯಾಟರಿ ಬೇಗ ಖಾಲಿಯಾಗುತ್ತೆ:

ಮೊಬೈಲ್ ಡೇಟಾ ಸಕ್ರಿಯವಾಗಿರುವಾಗ, ನಿಮ್ಮ ಫೋನ್ ನಿರಂತರವಾಗಿ ನೆಟ್‌ವರ್ಕ್‌ಟವರ್‌ಗೆ ಸಂಪರ್ಕಿಸಲು ಪ್ರಯತ್ನಿಸುತ್ತಿರುತ್ತದೆ, ವಯಾಗಲೂ ಸಿಗ್ನಲ್ ದುರ್ಬಲವಾಗಿದ್ದರೆ. ಇದು ಫೋನ್‌ನ ಬ್ಯಾಟರಿಯನ್ನು ಬಹಳ ವೇಗವಾಗಿ ಖಾಲಿ ಮಾಡುತ್ತದೆ.

You may also like