Home » Belagavi (Chikkodi): ಹೆರಿಗೆ ನಂತರ ಬಟ್ಟೆ, ಹತ್ತಿಯುಂಡೆ ಹೊಟ್ಟೆಯಲ್ಲೇ ಬಿಟ್ಟು ಸ್ಟಿಚ್‌ ಹಾಕಿದ ವೈದ್ಯರು

Belagavi (Chikkodi): ಹೆರಿಗೆ ನಂತರ ಬಟ್ಟೆ, ಹತ್ತಿಯುಂಡೆ ಹೊಟ್ಟೆಯಲ್ಲೇ ಬಿಟ್ಟು ಸ್ಟಿಚ್‌ ಹಾಕಿದ ವೈದ್ಯರು

0 comments

Belagavi: ಅಪರೇಷನ್‌ ಮಾಡಿದ ಬಳಿಕ ಹೊಟ್ಟೆಯಲ್ಲಿಯೇ ಬಟ್ಟೆ, ಹತ್ತಿ ಉಂಡೆಯನ್ನು ಬಿಟ್ಟು ಹೊಲಿಗೆ ಹಾಕಿದ ಘಟನೆಯೊಂದು ನಡೆದಿದೆ. ಚಿಕ್ಕೋಡಿ ತಾಯಿ ಮಕ್ಕಳ ಆಸ್ಪತ್ರೆಗೆ ತಾಲೂಕಿನ ಮುಗುಳಿ ಗ್ರಾಮದ ಗರ್ಭಿಣಿ ಶ್ರುತಿ ಬಡಿಗೇರ ಫೆ.7 ರಂದು ದಾಖಲಾಗಿದ್ದರು. ವೈದ್ಯರು ಹೆರಿಗೆ ನಂತರ ಬಾಣಂತಿ ಹೊಟ್ಟೆಯ ಕೆಳಭಾಗದಲ್ಲಿ ಹತ್ತಿ ಹಾಗೂ ಬಟ್ಟೆಯನ್ನು ಬಿಟ್ಟು ಹೊಲಿಗೆ ಹಾಕಿ ಮನೆಗೆ ಕಳುಹಿಸಿದ್ದಾರೆ. ಆದರೆ ಕೆಲವು ದಿನಗಳ ಬಳಿಕ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅನಂತರ ವಿಷಯ ಬೆಳಕಿಗೆ ಬಂದಿದೆ.

ಫೆ.7 ರಂದು ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಶೃತಿ ಬಡಿಗೇರ ಹೆರಿಗೆಗೆ ದಾಖಲಾಗಿದ್ದು, ನಾರ್ಮಲ್‌ ಹೆರಿಗೆ ಮಾಡಿದ ವೈದ್ಯರು ರಕ್ತಸ್ರಾವ ತಡೆಗಟ್ಟಲು ಬಾಣಂತಿಯ ಹೊಟ್ಟೆಯಲ್ಲಿ ಹತ್ತಿ ಉಂಡೆ, ಬಟ್ಟೆ ಬಿಟ್ಟು ಹೊಲಿಗೆ ಹಾಕಿದ್ದರು. ಆದರೆ ಎರಡು ದಿನದ ನಂತರ ಅದನ್ನು ತೆಗೆಯಲು ಮರೆತಿದ್ದಾರೆ ವೈದ್ಯರು. ಹಾಗೂ ಬಾಣಂತಿಯನ್ನು ಹಾಗೆನೇ ಬಿಟ್ಟು ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಅನಂತರ ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಹುಕ್ಕೇರಿಯ ತಾಲೂಕು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದಾಗ ವಿಷಯ ತಿಳಿದು ಬಂದಿದ್ದು, ಉಂಡೆಯನ್ನು ತೆಗೆಯಲಾಯಿತು. ಈ ಕುರಿತು ವೈದ್ಯಾಧಿಕಾರಿ ಸುಕುಮಾರ್‌ ಅವರು ಈ ಘಟನೆ ಆಗಿರುವುದು ನಿಜ. ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಈ ಕುರಿತು ಹುಕ್ಕೇರಿ THO ಅವರ ಜೊತೆ ಸಮಾಲೋಚನೆ ಮಾಡಲಾಗಿದ್ದು, ವೈದ್ಯರಲ್ಲೂ ವರದಿ ಕೇಳಿದ್ದೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

You may also like