Home » ನಾಯಿ ಕಚ್ಚಿದಕ್ಕೆ 4ಲಕ್ಷ ರೂ ದಂಡ ವಿಧಿಸಿದ ಗ್ರಾಹಕರ ವೇದಿಕೆ

ನಾಯಿ ಕಚ್ಚಿದಕ್ಕೆ 4ಲಕ್ಷ ರೂ ದಂಡ ವಿಧಿಸಿದ ಗ್ರಾಹಕರ ವೇದಿಕೆ

by Praveen Chennavara
0 comments

ನಾಯಿ ಕಚ್ಚಿದ ಘಟನೆಗೆ ಸಂಬಂಧಿಸಿದಂತೆ ಸುರಕ್ಷತೆಯ ಲೋಪಕ್ಕೆ ಎಂದು ಗುರುಗ್ರಾಮದ ಜಿಲ್ಲಾ ಗ್ರಾಹಕರ ವೇದಿಕೆಯು ಗೇಟೆಡ್ ಹೌಸಿಂಗ್ ಸೊಸೈಟಿಯ ನಿರ್ವಹಣೆ ಮತ್ತು ಅದರ ಭದ್ರತಾ ಏಜೆನ್ಸಿಯ ಮೇಲೆ ಸುಮಾರು ನಾಲ್ಕು ಲಕ್ಷ ರೂ ದಂಡ ವಿಧಿಸಿದೆ.

ಹರಿಯಾಣದ ಗುರುಗ್ರಾಮ ನಿವಾಸಿಯಾದ ಪಂಕಜ್ ಅಗರ್‌ವಾಲ್ ಎಂಬವರು ಕುಟುಂಬದೊಂದಿಗೆ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಂಕಜ್‌ ಅಗರ್ವಾಲ್ ಅವರ ಮಗಳಿಗೆ ಅಪಾರ್ಟೆಂಟ್‌ನಲ್ಲಿದ್ದ ನಾಯಿ ಒಂದು ಕಚ್ಚಿದೆ , ಈ ಹಿನ್ನೆಲೆ ಗೇಟೆಡ್ ಹೌಸಿಂಗ್ ಸೊಸೈಟಿ ಯ ನಿರ್ವಹಣೆ ಮತ್ತು ಅದರ ಭದ್ರತೆ ಸರಿಯಿಲ್ಲ ಎಂದು ಅವರು ಗ್ರಾಹಕರ ವೇದಿಕೆಗೆ ದೂರು ಕೊಟ್ಟಿದ್ದರು .

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರ ವೇದಿಕೆ 4ಲಕ್ಷ ರೂ ದಂಡ ವಿಧಿಸಿದೆ .

You may also like

Leave a Comment