Home » Puttur: ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಇದ್ದ ನಾಯಿ ಅನಿಮಲ್‌ ಕೇರ್‌ ಸೆಂಟರ್‌ಗೆ ರವಾನೆ!

Puttur: ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಇದ್ದ ನಾಯಿ ಅನಿಮಲ್‌ ಕೇರ್‌ ಸೆಂಟರ್‌ಗೆ ರವಾನೆ!

0 comments

Puttur: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಗುರುವಾರ ನಾಯಿಯೊಂದು ಕಾಣಿಸಿಕೊಂಡಿದ್ದು, ಸಿಕ್ಕ ಸಿಕ್ಕವರಿಗೆ ತೊಂದರೆ ಕೊಡುತ್ತಿದ್ದು, ಶುಕ್ರವಾರಬೆಳಿಗ್ಗೆ ಅನಿಮಲ್ ಕೇರ್‌ ಟ್ರಸ್ಟ್‌ ಹಿಡಿದು ಮಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಅನಿಮಲ್‌ ಕೇರ್‌ ಟ್ರಸ್ಟ್‌ನ ಮಮತಾ ರಾವ್‌ ಬೆಳಗ್ಗೆ ದೇವಳದ ವಠಾರಕ್ಕೆ ಬಂದು ಅಸ್ವಸ್ಥಗೊಂಡಿದ್ದ ನಾಯಿಯ ರಕ್ಷಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ಜೊಲ್ಲು ಸುರಿಸಿಕೊಂಡು ದೇವಳದ ವಠಾರದಲ್ಲಿ ನಾಯಿಯೊಂದು ಮಾ.27 ರಂದು ಕಂಡು ಬಂದಿತ್ತು. ಇದು ನಂತರ ಬಾಲಕಿಯೋರ್ವಳ ಮೇಲೆ ಹಾರಿ ಆಕೆಯ ಬಟ್ಟೆಯನ್ನು ಹರಿದು ಹಾಕಿತ್ತು. ಇಬ್ಬರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಎಷ್ಟೇ ಓಡಿಸಿದರೂ ಮತ್ತೆ ಅದೇ ವಠಾರದಲ್ಲಿ ಬರುತ್ತಿತ್ತು. ಹೀಗಾಗಿ ಭಕ್ತರಿಗೆ ದೇವಳ ಸಮಿತಿ ಎಚ್ಚರಿಕೆಯಿಂದ ಇರಲು ಭಕ್ತರಲ್ಲಿ ವಿನಂತಿ ಮಾಡಿತ್ತು.

You may also like