Home » Dolly Dhananjay Marriage: ಹಸೆಮಣೆ ಏರಲಿರುವ ಡಾಲಿ: ಎದೆ ಗೂಡಲ್ಲಿ ಬಚ್ಚಿಟ್ಟ ಪ್ರೀತಿಯ ಹುಡುಗಿ ಇವರೇ ನೋಡಿ

Dolly Dhananjay Marriage: ಹಸೆಮಣೆ ಏರಲಿರುವ ಡಾಲಿ: ಎದೆ ಗೂಡಲ್ಲಿ ಬಚ್ಚಿಟ್ಟ ಪ್ರೀತಿಯ ಹುಡುಗಿ ಇವರೇ ನೋಡಿ

0 comments

Dolly Dhananjay Marriage: ಸ್ಯಾಂಡಲ್‌ವುಡ್‌ನ ಬ್ಯಾಚುಲರ್, ಹ್ಯಾಂಡಸಮ್ ಯುವಕ ಡಾಲಿ ಧನಂಜಯ್ (Dolly Dhananjay) ಮದುವೆಗೆ ಯಾವಾಗ? ಹುಡುಗಿ ಯಾರು ಎಂಬ ಪ್ರಶ್ನೆಗೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಉತ್ತರ ಸಿಕ್ಕಿದೆ. ಹೌದು, ಮದುವೆ ಯಾವಾಗ ಎನ್ನುವ ಪ್ರಶ್ನೆ ಡಾಲಿಗೆ ಯಾವಾಗಲೂ ಎದುರಾಗುತ್ತಿತ್ತು. ಹೋದಲ್ಲಿ ಬಂದಲ್ಲಿ ಡಾಲಿಗೆ ಮದುವೆ ಪ್ರಶ್ನೆಯೇ ಎದುರಾಗುತ್ತಿತ್ತು. ಇದೀಗ ಆ ಪ್ರಶ್ನೆಗೆ ಡಾಲಿ ಧನಂಜಯ ಕಡೆಯಿಂದ ಉತ್ತರ ಸಿಕ್ಕಿದೆ.

ಇದೀಗ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದು, ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋ ಹಂಚಿಕೊಳ್ಳುವ ಮೂಲಕ ಧನಂದಯ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ಡಾಲಿ ಯಾರನ್ನು ಮುದುವೆಯಾಗುತ್ತಾರೆ, ಚಿತ್ರರಂಗದವರಾ ಅಥವಾ ಬೇರೆ ಕ್ಷೇತ್ರದವರನ್ನು ಮದುವೆಯಾಗುತ್ತಾರಾ? ಹಾಗಿದ್ರೆ ಡಾಲಿ ಕೈ ಹಿಡಿಯುವ ಆ ಅದೃಷ್ಟ ಹುಡುಗಿ ಯಾರು ನೋಡೋಣ.

ವಿಶೇಷ ಅಂದ್ರೆ, ಡಾಲಿ ಕೈ ಹಿಡಿಯುವ ಹುಡುಗಿಯ ಜೊತೆಗೆ ಅನೇಕ ವರ್ಷಗಳ ಪರಿಚಯ ಇದೆಯಂತೆ. ಅಂತೆಯೇ ಧನಂಜಯ ವೈದ್ಯೆಯನ್ನು ಕೈ ಹಿಡಿಯುತ್ತಿದ್ದಾರೆ. ಹೌದು ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಡಾಲಿ ಅನ್ನು ಕೈ ಹಿಡುಯುತ್ತಿದ್ದಾರೆ.

ಮುಖ್ಯವಾಗಿ ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಮೈಸೂರಿನಲ್ಲಿ ಓದಿದ ಧನ್ಯತಾ ಚಿತ್ರದುರ್ಗ ಮೂಲದ ಈಕೆ ಅಪ್ಪಟ ಕನ್ನಡತಿ. ಇನ್ನು ಅರಸೀಕೆರೆ ಮೂಲದ ನಟ ಧನಂಜಯ ಓದಿದ್ದು ಕೂಡ ಮೈಸೂರಿನಲ್ಲಿ.

ಅಂದಹಾಗೆ ಇಬ್ಬರ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ ಎನ್ನಲಾಗಿದೆ.

ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ.

ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಡಾಲಿ ಸುಂದರವಾಗಿ ಕಂಗೊಳಿಸುತ್ತಿದ್ದಾರೆ. ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ ಧನಂಜಯ. ಸದ್ಯ ಇಬ್ಬರ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಪ್ರೀತಿಯ ಶುಭಾಶಯ ಹರಿದುಬರುತ್ತಿದೆ.

 

 

You may also like

Leave a Comment