Home » Donald Trump: ಭಾರತದ ಔಷಧಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್!

Donald Trump: ಭಾರತದ ಔಷಧಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್!

0 comments

Donald Trump : ಭಾರತದ ಮೇಲೆ ಬೇಕಾಬಿಟ್ಟಿ ಸುಂಕ ವಿಧಿಸಿ ಹುಚ್ಚಾಟ ಮೆರೆಯುತ್ತಿರುವ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಮೊಂಡಾಟ ತೋರಿದ್ದು ಔಷಧಿಗಳ ಮೇಲೆ ಶೇಕಡ ನೂರರಷ್ಟು ಸುಂಕ ವಿಧಿಸಿ ಘೋಷಣೆ ಮಾಡಿದ್ದಾರೆ.

ಹೌದು, ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗುರುವಾರ ಅಕ್ಟೋಬರ್ 1 ರಿಂದ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ (Pharmaceutical Drugs) ಆಮದಿನ ಮೇಲೆ 100% ವರೆಗಿನ ಸುಂಕವನ್ನು (US Tariffs) ಘೋಷಿಸಿದ್ದಾರೆ.

ಗುರುವಾರ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ “ಟ್ರುತ್ ಸೋಷಿಯಲ್” ನಲ್ಲಿ ಈ ಘೋಷಣೆ ಮಾಡಿದ್ದಾರೆ. ಈ ಕ್ರಮವು ಅಮೆರಿಕದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸದ ಔಷಧ ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ “ಔಷಧೀಯ ಕಂಪನಿಯು ಈಗಾಗಲೇ ಅಮೆರಿಕದಲ್ಲಿ ಔಷಧೀಯ ಘಟಕವನ್ನು ನಿರ್ಮಿಸಲು ಪ್ರಾರಂಭಿಸಿದ್ದರೆ, ಈ 100% ಸುಂಕವು ಅದಕ್ಕೆ ಅನ್ವಯಿಸುವುದಿಲ್ಲ.” ಇದರರ್ಥ ಅಮೆರಿಕದಲ್ಲಿ ಕಾರ್ಖಾನೆ ಅಥವಾ ಉತ್ಪಾದನಾ ಕೇಂದ್ರದ ನಿರ್ಮಾಣ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿರುವ ಕಂಪನಿಗಳು ಈ ಸುಂಕದಿಂದ ವಿನಾಯಿತಿ ಪಡೆಯುತ್ತವೆ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ:SL Bhyrappa: ‘ಸೂಳೆ ಮನೆಗೆ ಹೋಗಿದ್ಯಾ’ ಅಂತ ಆ ಹಿರಿಯರು ಕೇಳಿದ್ರು, ಭೈರಪ್ಪ ನಾಚಿಕೊಂಡ್ರು- ಹಾಗಿತ್ತು ಎಸ್.ಎಲ್ ಭೈರಪ್ಪ ಭೀಮಕಾಯ ಕಾದಂಬರಿ

ಅಮೆರಿಕದ ಸುಂಕದ ಸಾಲಿನಲ್ಲಿ ಈಗ ಔಷಧಿಯೂ ಸೇರಿರುವುದು ಜಾಗತಿಕವಾಗಿ ಅದರಲ್ಲೂ ಮುಖ್ಯವಾಗಿ ಭಾರತಕ್ಕೆ ನಡುಕ ತರಿಸಿದೆ. ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾದ ದೇಶೀಯ ಕೈಗಾರಿಕೆಗಳಲ್ಲಿ ಔಷಧ ವಲಯವೂ ಒಂದು. ಅಮೆರಿಕದ ಈ ಕ್ರಮದಿಂದ ಭಾರತದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇದೆ.

You may also like