Home » Donald Trump: ಅಮೇರಿಕಾ ಅಧ್ಯಕ್ಷರಾಗುತ್ತಿದ್ದಂತೆ ಭಾರತೀಯರಿಗೆ ಬಿಗ್ ಶಾಕ್ ನೀಡಿದ ಡೊನಾಲ್ಡ್ ಟ್ರಂಪ್ !!

Donald Trump: ಅಮೇರಿಕಾ ಅಧ್ಯಕ್ಷರಾಗುತ್ತಿದ್ದಂತೆ ಭಾರತೀಯರಿಗೆ ಬಿಗ್ ಶಾಕ್ ನೀಡಿದ ಡೊನಾಲ್ಡ್ ಟ್ರಂಪ್ !!

0 comments

Donald Trump: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅಮೋಘ ಜಯ ಸಾಧಿಸಿದ ಬೆನ್ನಲ್ಲೇ ಭಾರತೀಯರಿಗೆ ಬಿಗ್ ಶಾಕ್ ನೀಡಿದ್ದಾರೆ.

ಅಮೆರಿಕಾದ ನೂತನ ಅಧ್ಯಕ್ಷರಾದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್(Donald Trump)ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರೂ ಸೇರಿದಂತೆ ಅಲ್ಲಿನ ಪೌರತ್ವ ಪಡೆದಿರುವ ವಿದೇಶೀ ದಂಪತಿಗಳಿಗೆ ಶಾಕ್ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ನೂರಾರು ಭಾರತೀಯ ದಂಪತಿಗಳು ತೊಂದರೆಗೆ ಸಿಲುಕಲಿದ್ದಾರೆ.

ಅಂದಹಾಗೆ ಈ ನಿಯಮದ ಅನ್ವಯ ಪೋಷಕರಲ್ಲಿ ಒಬ್ಬರು ಅಮೆರಿಕಾದ ಖಾಯಂ ನಿವಾಸಿಯಾಗಿರಬೇಕು ಅಥವಾ ತಮ್ಮ ಮಕ್ಕಳಿಗಾಗಿ ಕಾನೂನಾತ್ಮಕವಾಗಿ ಅಮೆರಿಕಾ ನಿವಾಸಿಯಾಗಿರಬೇಕು ಎಂದು ಹೊಸ ನಿಯಮದಲ್ಲಿ ತಿದ್ದುಪಡಿಯಾಗಲಿದೆ. ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ನಿಯಮದ ಪ್ರಕಾರ ಅಮೆರಿಕಾದಲ್ಲಿ ಜನಿಸಿದ ಮಾತ್ರಕ್ಕೆ ಮಕ್ಕಳಿಗೆ ಅಟೋಮೇಟಿಕ್ ಆಗಿ ಅಲ್ಲಿನ ನಾಗರಿಕತ್ವ ಸಿಗದು.

ಭಾರತೀಯರಿಗೆ ಇದು ಹೇಗೆ ಪರಿಣಾಮ ಬೀರಲಿದೆ?
ಅಮೆರಿಕಾದಲ್ಲಿ ಪ್ರಸಕ್ತ 4.8 ಮಿಲಿಯನ್ ಭಾರತೀಯರಿದ್ದಾರೆ. ಈ ಪೈಕಿ ಶೇ.34 ರಷ್ಟು ಮಂದಿ ಅಮೆರಿಕಾದಲ್ಲೇ ಜನಿಸಿದವರಾಗಿದ್ದಾರೆ. ಒಂದು ವೇಳೆ ಟ್ರಂಪ್ ಹೊಸ ನಿಯಮ ಜಾರಿಗೆ ತಂದರೆ ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ. ಈ ನಿಯಮ ಜಾರಿಗೆ ಬಂದರೆ ಅಮೆರಿಕಾ ಖಾಯಂ ನಿವಾಸಿಯಾಗಿರದ ಅಥವಾ ಗ್ರೀನ್ ಕಾರ್ಡ್ ಇಲ್ಲದ ಭಾರತೀಯ ದಂಪತಿಗೆ ಜನಿಸಿದ ಮಕ್ಕಳು ಅಟೋಮೇಟಿಕ್ ಆಗಿ ಅಮೆರಿಕಾ ನಾಗರಿಕತ್ವ ಪಡೆಯಲು ಅನರ್ಹರಾಗಿರುತ್ತಾರೆ. ಹೀಗಾಗಿ ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ಈ ನಿಯಮ ನೇರವಾಗಿ ಭಾರತೀಯರ ಮೇಲೆ ಪರಿಣಾಮ ಬೀರಲಿದೆ.

You may also like

Leave a Comment