Pratam: ನಟ ಪ್ರಥಮ್ ಅವರು ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಥಮ್ ಕೊಲೆ ಆರೋಪಿ ನಟ ದರ್ಶನ್ ಮತ್ತವರ ಅಭಿಮಾನಿಗಳಿಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಹೌದು, ದರ್ಶನ್ ಸರ್, ಒಳ್ಳೆಯವ್ರ ಸಹವಾಸ ಇಟ್ಕೊಳ್ಳಿ. ನಿಮ್ಗೆ ಪ್ರೀತಿಯಿಂದ ಹೇಳ್ತಿದಿನಿ ದರ್ಶನ್ ಸರ್. ನಿಮ್ ಹುಡುಗರಿಗೆ ಹೇಳಿ. ನಿಮ್ಗೆ ಫ್ಯಾನ್ಸ್ ಇರುವಂತೆ ನಮಗೂ ಇದ್ದಾರೆ ಸರ್, ನಾವು ಪ್ರೀತಿ ಗಳಿಸಿದ್ದೀವಿ ಸರ್. ದರ್ಶನ್ ಜೊತೆ ಇದ್ದವ್ರು ಯೋಗ್ಯರು ಇರಬೇಕು. ನಮ್ಗೆ ಸಮಸ್ಯೆ ಆದ್ರೆ ಸುಮ್ಮನೆ ಇರಲ್ಲ ಅಂತ ಪ್ರಥಮ್ ವಾರ್ನಿಂಗ್ ಕೊಟ್ಟಿದ್ದಾರೆ.
ಅಲ್ಲದೆ ನಾನು ಯಾರ ಹೆಸರನ್ನೂ ಯಾಕೆ ಹೇಳ್ತಿಲ್ಲ ಅಂದ್ರೆ, ಅವರ ಮೇಲೆ ಗೌರವ ಇದೆ. 2,000 ಜನ ಫೋನ್ ಮಾಡಿ ಕಂಪ್ಲೆಂಟ್ ಕೊಡಿ ಅಂತ ಹೇಳಿದ್ರು. ದೂರು ಕೊಟ್ಟರೆ ಬೆಂಕಿ ಹೊತ್ತಿಕೊಳ್ಳುತ್ತೆ ಇಂತಹ ಗೂಂಡಾಗಳನ್ನ ಯಾಕೆ ಸಾಕುತ್ತೀರಾ? ಮನೆಯಲ್ಲಿ ನಾಯಿ ಸಾಕಿ, ಬೆಕ್ಕು, ಗಿಳಿ, ಪಾರಿವಾಳ ಸಾಕಿ, ಇದೆಲ್ಲ ಬೇಡ. ಕಲಾವಿದರು ಕಲಾವಿದರಾಗಿಯೇ ಇರಿ. ನಿಮ್ಮ ಹೆಸರು ದುರ್ಬಳಕೆ ಆಗ್ತಿದೆ ಅಂದಾಗ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದ್ದಾರೆ.
ಅಂದಹಾಗೆ ಚಿತ್ರೀಕರಣಕ್ಕೆ ಹೋಗುವ ಮುನ್ನ ನಟ ಪ್ರಥಮ್ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಪ್ರಥಮ್ ಲಾಯರ್ ಜಗದೀಶ್ ಜೊತೆ ಮಾತನಾಡಿರುವ ಆಡೀಯೋ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಪ್ರಥಮ್ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಬಲವಂತವಾಗಿ ಕರೆದೊಯ್ದು ನಮ್ಮ ಬಾಸ್ (DBoss) ಬಗ್ಗೆ ಮಾತನಾಡುತ್ತಿಯಾ ಅಂತ ಹಲ್ಲೆಗೆ ಯತ್ನಿಸಿ, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ದುಷ್ಕರ್ಮಿಗಳು ನನಗೆ ಬೆದರಿಕೆ ಹಾಕುತ್ತಿದ್ದಾಗ ರಕ್ಷಕ್ ಬುಲೆಟ್ ಸಹ ಆ ಗ್ಯಾಂಗ್ ಜೊತೆ ಇದ್ದ ಎಂದು ಪ್ರಥಮ್ ಹೇಳಿದ್ದಾರೆ.
