Rapido Taxi: ರ್ಯಾಪಿಡೋ ಸೇರಿ ಬೈಕ್ ಟ್ಯಾಕ್ಸಿಗಳಿಂದ ಸಾಕಷ್ಟು ಅನುಕೂಲ ಇದೆ. ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಅನುಮತಿ ನೀಡಬೇಕು ಎಂದು ಸದನದಲ್ಲಿ ಇಂದು ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಪ್ರಸ್ತಾಪ ಮಾಡಿದರು.ಗಿಗ್ ವರ್ಕರ್ಸ್ ಬರೋಬ್ಬರಿ 8 ಲಕ್ಷ ಯುವಕರಿದ್ದಾರೆ. ಇದು ಅವರ ಜೀವನದ ಪ್ರಶ್ನೆ. ಝೋಮಾಟೋ, ಸ್ವಿಗ್ಗಿಯಂತವುಗಳಿಂದ ಬಹಳ ಅನೂಕುಲ ಇದೆ ಎಂದು ಸರ್ಕಾರಕ್ಕೆ ಹೇಳಿದರು.
ಕಾರ್ ಪೂಲಿಂಗ್ ಕೂಡ ಇದೇ ಸಿಸ್ಟಮ್ ನಲ್ಲಿದೆ. ಮೆಟ್ರೋ ಬಳಸುವವರಿಗೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಮಾಡಿದ್ದರಿಂದ ಬಹಳ ತೊಂದರೆ ಆಗುತ್ತಿದೆ. ೫೦ ಲಕ್ಷ ಜನರಿಗೆ ಬೈಕ್ ಟ್ಯಾಕ್ಸಿ ಗಳಿಂದ ಅನುಕೂಲ ಆಗುತ್ತಿದೆ. ಸರ್ಕಾರ ಇದಕ್ಕೊಂದು ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಎಂದು ಡಿ ಎಸ್ ಅರುಣ್ ಕೇಳಿಕೊಂಡರು.
ದೇಶಾದ್ಯಂತ ಬೈಕ್ ಟ್ಯಾಕ್ಸಿ ಯಿಂದ ಅನುಕೂಲ ಆಗಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಜನರನ್ನು ಕರೆದುಕೊಂಡು ಹೋಗುವ ಬೈಕ್ ಟ್ಯಾಕ್ಸಿ ಯಿಂದ ಬಹಳ ಅನುಕೂಲ ಆಗುತ್ತದೆ. ಟೂ ವೀಲರ್ ಯೆಲ್ಲೋ ಬೋರ್ಡ್ ಇಲ್ಲ ಅನ್ನುವ ಕಾರಣಕ್ಕೆ ನಿರ್ಬಂಧ ಸರಿಯಲ್ಲ ಎಂದರು.
ಇದಕ್ಕೆ ಸದನದಲ್ಲಿ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, 2018ರಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೆ ಸಂಬಂಧಿಸಿ ಸಾಧಕ ಬಾಧಕ ಪರಿಶೀಲನೆಗೆ ಸಮಿತಿ ರಚಿಸಲಾಗಿತ್ತು. ರ್ಯಾಪಿಡೋ ಬೈಕ್ ಟ್ಯಾಕ್ಸಿ ವಿರುದ್ದ ಆಟೋ ಚಾಲಕರು ಸ್ಟ್ರೈಕ್ ಮಾಡಿದರು. 2021ರಲ್ಲಿ ಕೇವಲ ವಿದ್ಯುತ್ ಚಾಲಿತ ಸ್ಕೂಟರ್ ಗಳಿಗೆ ಅನುಮತಿ ನೀಡಲಾಗಿತ್ತು. ಕಾರ್ ಪೂಲಿಂಗ್ ಗೆ ಸರ್ಕಾರ ತಡೆ ಒಡ್ಡಿಲ್ಲ, ನಿರ್ಬಂಧ ಮಾಡಿಲ್ಲ. ಬೈಕ್ ಟ್ಯಾಕ್ಸಿ ವಿಚಾರ ಕೋರ್ಟ್ ನಲ್ಲಿದೆ, ಕೋರ್ಟ್ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದು ಡಿ ಎಸ್ ಅರುಣ್ ಅವರಿಗೆ ಸಾರಿಗೆ ಸಚಿವರು ಉತ್ತರ ನೀಡಿದರು.
Puttur: ಪುತ್ತೂರು: “ನಮ್ಮ ಕೈಕಾರಡ್ ಕೆಸರ್‌ಡೊಂಜಿ ದಿನ” ಕಾರ್ಯಕ್ರಮದಲ್ಲಿ ತಾಲೂಕು ಕರ್ನಾಟಕ ಜರ್ನಲಿಸ್ಟ್
ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿಯವರಿಗೆ “ಸಹ್ಯಾದ್ರಿ ಸಿರಿ ಪ್ರಶಸ್ತಿ
