1
Udupi: ವರದಕ್ಷಿಣೆಯಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ವಿದೇಶದಲ್ಲಿರುವ ಪತಿ ಮಹಾಶಯನೊಬ್ಬ ಅಲ್ಲಿಂದಲೇ ಮೊಬೈಲ್‌ನಲ್ಲೇ ತಲಾಖ್ ನೀಡಿದ ಘಟನೆ ನಡೆದಿರುವ ಕುರಿತು ತೆಂಕ ಗ್ರಾಮದ ನಿವಾಸಿ ಸುಹಾನಾ (28) ಎಂಬುವವರು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಎರ್ಮಾಳು ಗುಜ್ಜಿಗೌಸ್‌ನ ಮುಬೀನ್ ಶೇಖ್ ಎಂಬುವವರನ್ನು 2024 ರ ಅಕ್ಟೋಬರ್‌ನಲ್ಲಿ 12.5 ಪವನ್ ಗೋಲ್ಡ್ ವರದಕ್ಷಿಣೆ ನೀಡಿ ಮದುವೆ ಮಾಡಿಸಿದ್ದರು. ಮದುವೆಗೆ 20 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೆ ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ಹೆಚ್ಚಾಗಿದೆ. ಆಗಲೇ ಆತ ವಿದೇಶಕ್ಕೆ ಹೋಗಿದ್ದ. ಜುಲೈ 15 ರಂದು ಮಹಿಳೆಯ ಮೇಲೆ ಇಲ್ಲ ಸಲ್ಲದ ಆರೋಪವೆಸಗಿ ಮೊಬೈಲ್‌ನಲ್ಲಿಯೇ ತಲಾಖ್ ನೀಡಿರುವುದಾಗಿ ಸುಹಾನಾ ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಮೊಬೈಲ್ ಮೂಲಕ ತಲಾಖ್ ನೀಡಿದ್ದಾಗಿ ಸುಹಾನಾ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Sandalwood: 3.15 ಕೋಟಿ ಹಣ ವಂಚನೆ ಆರೋಪ: ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್
