Dr Broo: ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಎಂದರೆ ಕನ್ನಡಿಗರಿಗೆಲ್ಲ ಅದೇನೋ ಅಚ್ಚುಮೆಚ್ಚು. ನಮಸ್ಕಾರ ದೇವರು ಎನ್ನುತ್ತಾ ಇಡೀ ವಿಶ್ವವನ್ನು ಕನ್ನಡಿಗರಿಗೆ ತೋರಿಸಿದ ಹೆಮ್ಮೆಯ ಯುವಕ ಈತ. ಈತನ ಮಾತು ಕೇಳುತ್ತ ಆತ ಮಾಡುವ ಫ ವಿಡಿಯೋ ನೋಡುವುದೇ ಕನ್ನಡಿಗರಿಗೆ ಒಂದು ಖುಷಿ. ಡಾಕ್ಟರ್ ಬ್ರೋ(Dr Broo) ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದು ಲಕ್ಷಗಟ್ಟಲೆ ವೀವ್ಸ್ ಪಡೆಯುತ್ತದೆ. ಆದರೆ ಇದೀಗ 3 ತಿಂಗಳಿಂದ ಡಾ. ಬ್ರೋ ಅವರು ಯೂಟ್ಯೂಬ್ ನಲ್ಲಿ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?
ಕಳೆದ 5 ತಿಂಗಳಿನಿಂದ ಯೂಟ್ಯೂಬ್ ಚಾನೆಲ್‌ನಲ್ಲಿ ಯಾವುದೇ ಹೊಸ ವಿಡಿಯೋ ಅಪ್‌ಲೋಡ್ ಆಗಿಲ್ಲ. ಅವರು ಕೆಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಬಿಟ್ಟರೆ ಐದು ತಿಂಗಳ ಹಿಂದೆ ಅವರು ನೇಪಾಳಕ್ಕೆ ಹೋಗಿ ಅಲ್ಲಿ ವಿಡಿಯೋ ಮಾಡಿದ್ದರು. ಅದಾದ ನಂತರ ಅವರು ಬೇರೆ ದೇಶಗಳ ಪ್ರವಾಸ ಮಾಡಿಲ್ಲವೋ ಅಥವಾ ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿಲ್ಲವೋ ಈ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕಿದೆ. ಆದರೆ ಇದರ ಹಿಂದೆ ಬೇರೆಯ ಕಾರಣ ಇದೆ.
ಅಂದಹಾಗೆ ಅಂದಹಾಗೆ ಕೇವಲ 25ರ ಹರೆಯದಲ್ಲಿ Dr. Bro ಅವರು ಯೂಟ್ಯೂಬ್ ಮೂಲಕ ಮನೆಮಾತಾಗಿ, ಆ ಟ್ರಾವೆಲ್‌ನ್ನು ಉದ್ಯಮವನ್ನಾಗಿ “ಗೋ ಪ್ರವಾಸ” ಎಂಬ ಉದ್ಯಮ ರೂಪಿಸಿಕೊಂಡಿದ್ದಾರೆ. ಇದು ಒಬ್ಬ ವ್ಯಕ್ತಿಯ ಯಶಸ್ಸಿನ ಕಥೆಯಲ್ಲ, ಇದು ಪ್ರತಿಯೊಬ್ಬ ಕನ್ನಡಿಗನ ಕನಸಿಗೆ ಬೆಲೆಕೊಡುವ ಹಾದಿ! ಬೇರೆಯವರ ಕೈಕೆಳಗಡೆ ಉದ್ಯೋಗ ಮಾಡಲು ಇಷ್ಟವಿಲ್ಲದೆ, ಗಗನ್ ಶ್ರೀನಿವಾಸ್ ಅವರು ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾವನ್ನೇ ಬಳಸಿಕೊಂಡು, ಅದನ್ನೇ ಸಾಧನೆಯ ವೇದಿಕೆಯಾಗಿಸಿಕೊಂಡು, ಹೊಸ ಬಿಸಿನೆಸ್ ಮಾದರಿಯನ್ನೇ ಕನ್ನಡಿಗರ ಮುಂದಿಟ್ಟಿದ್ದಾರೆ. ಈ ಉದ್ಯಮದಲ್ಲಿ ಬ್ಯುಸಿ ಆಗಿರೋ ಅವರು ಬೇರೆ ದೇಶಗಳಿಗೆ ಹೋಗ್ತಿಲ್ಲ, ವಿಡಿಯೋ ಮಾಡ್ತಿಲ್ಲ ಎಂದು ಕೂಡ ಹೇಳಲಾಗ್ತಿದೆ. ಆದರೆ, ಯಾವ ಕಾರಣಕ್ಕೆ ಡಾ ಬ್ರೋ ವಿಡಿಯೋ ಅಪ್ಲೋಡ್ ಮಾಡುತ್ತಿಲ್ಲ ಅಂತ ಅವರಿಂದಲೇ ತಿಳಿದುಕೊಳ್ಳಲು ಅವರ ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: Delhi Temprature: ದೆಹಲಿಯಲ್ಲಿ ಇಂದು ಈ ಋತುವಿನ ಕನಿಷ್ಠ ತಾಪಮಾನ ದಾಖಲು – ವಾಯು ಗುಣಮಟ್ಟ ಹೇಗಿದೆ?
