Home » Mangaluru: ಅಂತಾರಾಷ್ಟ್ರೀಯ ಕಿರೀಟ ಗೆದ್ದ ಮಂಗಳೂರಿನ ವೈದ್ಯೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್

Mangaluru: ಅಂತಾರಾಷ್ಟ್ರೀಯ ಕಿರೀಟ ಗೆದ್ದ ಮಂಗಳೂರಿನ ವೈದ್ಯೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್

by ಕಾವ್ಯ ವಾಣಿ
0 comments

Mangaluru : ಮಂಗಳೂರಿನ (Mangaluru) ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಅವರು ಇತ್ತೀಚೆಗೆ ಫಿಲಿಪೈನ್ಸ್ ಮನಿಲಾದಲ್ಲಿ ನಡೆದ ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಪೇಜೆಂಟ್‌ನಲ್ಲಿ ಪ್ರಥಮ ರನ್ನರ್ ಅಪ್ ಆಗಿ ಮೂಡಿ ಬಂದಿದ್ದಾರೆ.

ಮಿಸೆಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಪ್ರಥಮ ಮಹಿಳೆಯಾಗಿದ್ದಾರೆ. ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್ ಅವಾರ್ಡ್, ಬೆಸ್ಟ್ ಟ್ಯಾಲೆಂಟ್ ಸಬ್‌ಟೈಟಲ್‌ಗಳು ಕೂಡ ಇವರಿಗೆ ದೊರೆತಿದೆ.

ನಗರದ ಏಜೆ ಹಾಗೂ ಅತೆನಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಫ್ಯಾಶನ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಈಗಾಗಲೇ 2023ರಲ್ಲಿ ನಡೆದ ಡಾಕ್ಟರ್ಸ್ ಫ್ಯಾಶನ್ ರ‌್ಯಾಂಪ್‌ನಲ್ಲಿ ವಿಜೇತರಾಗಿದ್ದು ಮಾತ್ರವಲ್ಲದೆ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 5ನೇ ಆವೃತ್ತಿಯ ಕಿರೀಟ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ದಿವಾ 2024, ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್‌ ಇಂಟರ್ನ್ಯಾಷನಲ್ 2024 ಕಿರೀಟಗಳನ್ನು ಗೆದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಗಳಿಸಿಕೊಂಡಿದ್ದರು.

You may also like