Home » ಮದ್ಯ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ಇಂದಿನಿಂದ ಎರಡು ದಿನ ಬಾಗಿಲು ಮುಚ್ಚಲಿವೆ ಬಾರ್ ಗಳು !!

ಮದ್ಯ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ಇಂದಿನಿಂದ ಎರಡು ದಿನ ಬಾಗಿಲು ಮುಚ್ಚಲಿವೆ ಬಾರ್ ಗಳು !!

0 comments

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸೊಂದಿದೆ. ರಾಜ್ಯದಲ್ಲಿ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವ ಸಲುವಾಗಿ ಅಲ್ಲಲ್ಲಿ ಬಾರ್ ಗಳು ಎರಡು ದಿನ ಬಾಗಿಲು ಮುಚ್ಚಿವೆ.

ಹೌದು, ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ 44 ಗ್ರಾಮ ಪಂಚಾಯತಿಗಳು, ಇತರೆ ಕಾರಣದಿಂದ ಬಾಕಿ ಇದ್ದ 13 ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು 57 ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 27 ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಹಿನ್ನೆಲೆ ಡಿ.25 ರ ಸಂಜೆ 5 ಗಂಟೆಯಿಂದ ಡಿ.27 ರ ಸಂಜೆ 5 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ನಿಷೇಧಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಮದ್ಯಪಾನ ನಿಷೇಧಿಸಿದ್ದು, ಬಿಯರ್ ಬಾರ್ ಗಳು, ಕ್ಲಬ್ ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಲು ಸಹ ಆದೇಶಿಸಲಾಗಿದೆ. ಈ ದಿವಸಗಳನ್ನು ಶುಷ್ಕ ದಿನಗಳೆಂದು ಘೋಷಿಸಲಾಗಿದೆ.

ಈ ಆದೇಶ ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಯುವಂತಹ ರಾಜ್ಯದ ಇತರೆ ಜಿಲ್ಲೆಗಳ ಚುನಾವಣಾ ವ್ಯಾಪ್ತಿಯಲ್ಲಿಯೂ ಅನ್ವಯವಾಗಲಿದೆ. ಹೀಗಾಗಿ ಡಿ.25ರ ಸಂಜೆ 5 ಗಂಟೆಯಿಂದ ಡಿ.27, 2021 ಸಂಜೆ 5 ಗಂಟೆಯವರೆಗೆ ಮದ್ಯ ಸಿಗುವುದಿಲ್ಲ.

You may also like

Leave a Comment