Home » ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರದ ಬೊಕ್ಕಸ ತುಂಬಿಸಿದ ಮದ್ಯಪ್ರಿಯರು | ಸರ್ಕಾರಕ್ಕೆ ಎಷ್ಟು ಆದಾಯ ಒದಗಿಬಂದಿದೆ ಗೊತ್ತೇ?

ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರದ ಬೊಕ್ಕಸ ತುಂಬಿಸಿದ ಮದ್ಯಪ್ರಿಯರು | ಸರ್ಕಾರಕ್ಕೆ ಎಷ್ಟು ಆದಾಯ ಒದಗಿಬಂದಿದೆ ಗೊತ್ತೇ?

0 comments

ಬೆಂಗಳೂರು :ಬಾರ್ ರೆಸ್ಟೋರೆಂಟ್ ಎಷ್ಟು ಬಂದ್ ಮಾಡಿದರೂ ಸರ್ಕಾರದ ಬೊಕ್ಕಸ ತುಂಬಿಸೋದು ಮಾತ್ರ ಮದ್ಯವೇ. ಹೌದು.ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಸೃಷ್ಟಿಯಾಗಿದ್ದು, ಬಹುತೇಕ ಉದ್ಯಮಗಳು ನೆಲ ಕಚ್ಚಿದ್ದವು. ಹೀಗಾಗಿ ಸರ್ಕಾರದ ಆದಾಯ ಕೂಡ ತೀವ್ರವಾಗಿ ಕುಸಿದಿತ್ತು. ಆದರೆ, ಈ ಸಂದರ್ಭದಲ್ಲಿ ಸರ್ಕಾರದ ಕೈಯನ್ನು ಹಿಡಿದಿದ್ದು ಮಾತ್ರ ಮದ್ಯಪ್ರಿಯರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ 64,859.98 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿದೆ. ಅದರಲ್ಲಿಯೂ ಕೊರೊನಾ ಸಂಕಷ್ಟ ಕಾಲದ ಸಮಯದಲ್ಲಿಯೇ ಎಣ್ಣೆ ಪ್ರಿಯರೂ ಹೆಚ್ಚಾಗಿ ಮದ್ಯ ಖರೀದಿಸಿದ್ದು, ಅಂಕಿ – ಸಂಖ್ಯೆಯಿಂದ ಬಹಿರಂಗವಾಗುತ್ತಿದೆ.ಸರ್ಕಾರ ಹಾಗೂ ಅಬಕಾರಿ ಇಲಾಖೆಯ ಅಂಕಿ ಅಂಶದ ಪ್ರಕಾರ 2020-21ರಲ್ಲಿ 23,332.10 ಕೋಟಿ ರೂಪಾಯಿ, 2019-20ರಲ್ಲಿ 21,589.95 ಕೋಟಿ ರೂಪಾಯಿ ಹಾಗೂ 2018-29ರಲ್ಲಿ 19,943.93 ಕೋಟಿ ರಾಜಸ್ವ ಸಂಗ್ರಹವಾಗಿದೆ.

ಕೊರೊನಾದಿಂದಾಗಿ ಲಾಕ್ ಡೌನ್, ಕರ್ಫ್ಯೂ ಜಾರಿಗೊಳಿಸಲಾಗಿದ್ದ ಸಂದರ್ಭದಲ್ಲಿ ಸರ್ಕಾರದ ಕೈ ಹಿಡಿದು ನಡೆಸಿದ್ದು ಮಾತ್ರ ಮದ್ಯ ಪ್ರಿಯರು.ಸದ್ಯ ಅಬಕಾರಿ ಇಲಾಖೆ ರಾಜಸ್ವ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುತ್ತಿದೆ.

You may also like

Leave a Comment