Home » ಎಣ್ಣೆಗೂ ತಟ್ಟಿದ ಬೆಲೆ ಏರಿಕೆಯ ಬಿಸಿ!!ಮದ್ಯಪ್ರಿಯರಲ್ಲಿ ಕಾಡಿದೆ ಆತಂಕ!!

ಎಣ್ಣೆಗೂ ತಟ್ಟಿದ ಬೆಲೆ ಏರಿಕೆಯ ಬಿಸಿ!!ಮದ್ಯಪ್ರಿಯರಲ್ಲಿ ಕಾಡಿದೆ ಆತಂಕ!!

0 comments

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲಾ ವಸ್ತುಗಳ ಮೇಲೆ ತಟ್ಟಿದ್ದು, ಈ ನಡುವೆ ಬಿಯರ್ ದರವೂ ಏರಿಕೆಯಾಗುವ ಸಂಭವ ಹೆಚ್ಚಿದ್ದು,ನಶೆ ಪ್ರಿಯರಲ್ಲಿ ಅತ್ಯಂತ ಬೇಸರ ಮೂಡಿಸಿದೆ.

ಬಿಯರ್ ತಯಾರಿಸಲು ಬಳಸುವ ಬಾರ್ಲಿ ಹಾಗೂ ಇನ್ನಿತರ ವಸ್ತುಗಳ ಬೆಲೆ ಏರಿಕೆಯಾದ ಬೆನ್ನಲ್ಲೇ ಬಿಯರ್ ಪ್ಯಾಕೆಜಿಂಗ್ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮದ್ಯದ ಬೆಲೆ ಏರಿಕೆ ಹಾಗೂ ಇಳಿಕೆ ಕ್ರಮವನ್ನು ಸರ್ಕಾರ ನಿರ್ಧರಿಸಲಿದ್ದು, ಎಣ್ಣೆಯ ದರ ಏರಿಕೆಯಾಗದಂತೆ ನಿಯಂತ್ರಿಸಬಹುದು ಎನ್ನುವ ಅಭಿಪ್ರಾಯ ಮದ್ಯ ಪ್ರಿಯರಲ್ಲಿದೆ. ಈಗಾಗಲೇ ಹೊರರಾಜ್ಯಗಳಾದ ಮಧ್ಯಪ್ರದೇಶ, ಹರಿಯಾಣ ಸರ್ಕಾರಗಳು ಮದ್ಯದ ದರ ಏರಿಸಿದ್ದು,ಕರ್ನಾಟಕ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ. ಒಟ್ಟಿನಲ್ಲಿ ಬಿಯರ್ – ಹಾಟ್ ಕುಡಿಯುವ ನಶೆ ಪ್ರಿಯರಲ್ಲಿ ಬೆಲೆ ಏರಿಕೆಯ ಆತಂಕ ಕಾಡಿರುವುದು ಸುಳ್ಳಲ್ಲ.

You may also like

Leave a Comment