Home » Suicide: ಅಕ್ಕನ ಮಗಳ ಮದುವೆಗೆ ರಜೆ ಸಿಕ್ಕಿಲ್ಲ ಎಂದು ಬಸ್‌ನಲ್ಲೇ ನೇಣಿಗೆ ಶರಣಾದ ಚಾಲಕ!

Suicide: ಅಕ್ಕನ ಮಗಳ ಮದುವೆಗೆ ರಜೆ ಸಿಕ್ಕಿಲ್ಲ ಎಂದು ಬಸ್‌ನಲ್ಲೇ ನೇಣಿಗೆ ಶರಣಾದ ಚಾಲಕ!

by ಕಾವ್ಯ ವಾಣಿ
0 comments

Suicide: ಅಕ್ಕನ ಮಗಳ ಮದುವೆಗೆ ರಜೆ ನೀಡಿಲ್ಲ ಎಂದು ಮನನೊಂದ ಚಾಲಕ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಡಿಪೋದ 2ನೇ ಘಟಕದಲ್ಲಿ ಬಸ್‌ ಚಾಲಕ ಬಾಲಚಂದ್ರ ಹುಕೋಜಿ ನೇಣಿಗೆ ಶರಣಾಗಿದ್ದಾರೆ. ಬಾಲಚಂದ್ರ ತಮ್ಮ ಅಕ್ಕನ ಮಗಳ ಮದುವೆ ಇದ್ದ ಕಾರಣ ಕಳೆದ ಮೂರು ದಿನಗಳ ಹಿಂದೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ರಜೆಯನ್ನು ನಿರಾಕರಿಸಿದ್ದರಿಂದ ಬಾಲಚಂದ್ರ ಮನನೊಂದಿದ್ದರು.

ಸಿಬಿಟಿಯಿಂದ ವಡಗಾವ ನಗರ ಸಂಚಾರ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ಬಾಲಚಂದ್ರ ಅದೇ ಬಸ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like