Home » Mangaluru : ಅಪಘಾತದಲ್ಲಿ ಡ್ರೈವರ್‌ ಕಾಲು ನಜ್ಜುಗುಜ್ಜು! ಕಾರಿಳಿದು ರಕ್ಷಣೆಗೆ ಓಡೋಡಿ ಬಂದ ಸ್ಪೀಕರ್ ಖಾದರ್!!

Mangaluru : ಅಪಘಾತದಲ್ಲಿ ಡ್ರೈವರ್‌ ಕಾಲು ನಜ್ಜುಗುಜ್ಜು! ಕಾರಿಳಿದು ರಕ್ಷಣೆಗೆ ಓಡೋಡಿ ಬಂದ ಸ್ಪೀಕರ್ ಖಾದರ್!!

0 comments

Mangaluru : ಸ್ಪೀಕರ್ ಯುಟಿ ಖಾದರ್ ಅವರು ಸದಾ ಒಂದಿಲ್ಲೊಂದು ಸಮಾಜಮುಖಿ ವಿಚಾರದಿಂದ ಸುದ್ದಿಯಾಗುತ್ತಿರುತ್ತಾರೆ. ಅಂತೆಯೇ ಇದೀಗ ಅಪಘಾತ ಒಂದರಲ್ಲಿ ಲಾರಿ ಡ್ರೈವರ್ ಕಾಲು ನಜ್ಜುಗುಜ್ಜಾಗಿದ್ದು ಅವನ ನೆರವಿಗೆ ಖಾದರ್ ಅವರು ಧಾವಿಸಿ ಬಂದಿದ್ದಾರೆ.

ಹೌದು, ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುವ ವಾಹನ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ನಂದಿನಿ ಡೈರಿ ವಾಹನದ ಕ್ಯಾಬಿನ್ ನಲ್ಲಿ ಕಾಲು ಸಿಕ್ಕಿಕೊಂಡು ಸಂಕಷ್ಟದಲ್ಲಿದ್ದ ಚಾಲಕನ ರಕ್ಷಣೆಗೆ ಸ್ಪೀಕರ್ ಖಾದರ್ ಅವರು ಧಾವಿಸಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಡ್ಯಾರ್ ಕಣ್ಣೂರಿನಲ್ಲಿ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನವು ಡಿವೈಡರ್ ಹಾರಿ ಅತ್ತ ಕಡೆ ಸಂಚರಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಡ್ರೈವರ್ ಕಾಲು ಅದರಡಿ ಸಿಲುಕಿಕೊಂಡಿತ್ತು‌. ಇದೇ ಮಾರ್ಗವಾಗಿ ಬಂಟ್ವಾಳದತ್ತ ಸಂಚರಿಸುತ್ತಿದ್ದ ಸ್ಪೀಕರ್ ಯು. ಟಿ. ಖಾದರ್ ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ವಾಹನದ ಮುಂಭಾಗವನ್ನು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರ ಜೊತೆ ಯುಟಿ ಖಾದರ್ ಕೂಡಾ ಎಳೆದು ಸಹಾಯ ಮಾಡಿದ್ದಾರೆ. ಸದ್ಯ ಸ್ಪೀಕರ್‌ ಖಾದರ್ ಅವರ ಈ ಕೆಲಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

You may also like