Home » ಡ್ರೈವಿಂಗ್ ಮಾಡುತ್ತಿರುವಾಗ ಚಾಲಕನಿಗೆ ಫಿಡ್ಸ್ ಬಂದು ಕಂದಕಕ್ಕೆ ಉರುಳಿದ ಗಾಡಿ !! | 10 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಡ್ರೈವಿಂಗ್ ಮಾಡುತ್ತಿರುವಾಗ ಚಾಲಕನಿಗೆ ಫಿಡ್ಸ್ ಬಂದು ಕಂದಕಕ್ಕೆ ಉರುಳಿದ ಗಾಡಿ !! | 10 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

0 comments

ಶಿವಮೊಗ್ಗ: ರಾಮನಗರದ ಬಿಡದಿಯ ಪ್ರವಾಸಿಗರು ಸಿಗಂದೂರು ದೇವಿಯ ದರ್ಶನಕ್ಕೆ ಬರುವಾಗ ದಿಢೀರನೆ ಡ್ರೈವರ್​ಗೆ ಫಿಡ್ಸ್ ಬಂದ ಕಾರಣ, ಚಾಲಕನ ನಿಯಂತ್ರಣ ತಪ್ಪಿ ಟಿಟಿ ರಸ್ತೆ ಪಕ್ಕದ ಇಳಿಜಾರು ಪ್ರದೇಶಕ್ಕೆ ಉರುಳಿದ ಘಟನೆ ನಡೆದಿದೆ.

ಡ್ರೈವರ್​ಗೆ ಫಿಡ್ಸ್ ಬಂದ ಕಾರಣ ವಾಹನ ನಿಯಂತ್ರಣಕ್ಕೆ ಸಿಗದೆ, ಕಂದಕಕ್ಕೆ ಬಿದ್ದು 10 ಜನರಿಗೆ ಗಾಯವಾಗಿದೆ. ಇದರಲ್ಲಿ ನಾಲ್ಕು ಜನಕ್ಕೆ ತೀವ್ರ ತರಹದ ಗಾಯಗಳಾಗಿದ್ದು,ಇಬ್ಬರಿಗೆ ಕಾಲು ಮುರಿತವಾಗಿದೆ. ಉಳಿದ ಇಬ್ಬರಲ್ಲಿ‌ ಒಬ್ಬರ ತಲೆ ಹಾಗೂ ಕೈಗೆ ಗಾಯವಾಗಿದೆ. ಉಳಿದ ಆರು ಜನರಲ್ಲಿ ಮಕ್ಕಳೂ ಇದ್ದೂ, ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳೀಯ ಮುಖಂಡರಾದ ಜಿ.ಟಿ.ಸತ್ಯನಾರಾಯಣ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಸಹಕಾರ ನೀಡಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತೀವ್ರ ಗಾಯಗೊಂಡ ಗಾಯಾಳುಗಳನ್ನು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

You may also like

Leave a Comment