Home » Drone Prathap: ಮಾಡಿದ ತಪ್ಪನ್ನೆಲ್ಲ ತಾರಾ ಜೊತೆ ಹೇಳಿದ ಡ್ರೋನ್ ಪ್ರತಾಪ್- ಕೇಳಿದ್ರೆ ನಿಮ್ಮ ಕರುಳು ಚುರ್ ಅನ್ನುತ್ತೆ !

Drone Prathap: ಮಾಡಿದ ತಪ್ಪನ್ನೆಲ್ಲ ತಾರಾ ಜೊತೆ ಹೇಳಿದ ಡ್ರೋನ್ ಪ್ರತಾಪ್- ಕೇಳಿದ್ರೆ ನಿಮ್ಮ ಕರುಳು ಚುರ್ ಅನ್ನುತ್ತೆ !

1 comment
Drone Prathap

Drone Prathap: ಡ್ರೋನ್ ವಿಚಾರವಾಗಿ ಸಾಕಷ್ಟು ಟ್ರೋಲ್ ಹಾಗೂ ಟೀಕೆಗೊಳಗಾಗಿದ್ದ ಪ್ರತಾಪ್ (Drone Prathap) ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ ೧೦ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ದೊಡ್ಮನೆಗೆ ಎಂಟ್ರಿಕೊಟ್ಟ ಮೊದಲನೇ ವಾರವೇ ಡ್ರೋನ್ ಪ್ರತಾಪ್ ಸಾಕಷ್ಟು ಲೇವಡಿಗೆ ಒಳಗಾಗಿದ್ದರು. ಬಳಿಕ ಕಿಚ್ಚ ಸುದೀಪ್ ಅದನ್ನು ಖಂಡಿಸಿದ್ದರು. ಇದಾದ ಬಳಿಕ ಪ್ರತಾಪ್ ಕೊಂಚ ಧೈರ್ಯ ತಂದುಕೊಂಡಿದ್ದರು. ಆದರೆ, ಮೂರನೇ ವಾರ ಮನೆಯವರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೇ ಪ್ರತಾಪ್ ಗಳಗಳನೇ ಕಣ್ಣೀರು ಹಾಕಿದ್ದಾರೆ.

ವಿಜಯದಶಮಿ ಪ್ರಯುಕ್ತ ನಟಿ ತಾರಾ ಬಿಗ್‌ಬಾಸ್‌ ಮನೆಗೆ ಅತಿಥಿಯಾಗಿ ಆಗಮಿಸಿದ್ದರು. ದೊಡ್ಮನೆಯ ಸದಸ್ಯರೊಂದಿಗೆ ಸ್ವಲ್ಪ ಹೊತ್ತು ಕಾಲಕಾಳೆದ ಅವರು, ನಂತರ ಡ್ರೋನ್ ಪ್ರತಾಪ್ ಜೊತೆ ಮುಕ್ತವಾಗಿ ಮಾತನಾಡಿದರು. ಈ ವೇಳೆ ಡ್ರೋನ್ ಪ್ರತಾಪ್ ತಾರಾ ಅವರ ಜೊತೆಗೆ ತಮ್ಮೆಲ್ಲಾ ನೋವುಗಳನ್ನು ತೋಡಿಕೊಂಡಿದ್ದಾರೆ. ಕೇಳಿದ್ರೆ ನಿಮ್ಮ ಕರುಳು ಚುರ್ ಅನ್ನುತ್ತೆ !

ತಾಯಿಯ ಸ್ಥಾನದಲ್ಲಿ ನಿಂತು ತಾರಾ ಅವರು ಪ್ರತಾಪ್ ಗೆ ಕೆಲವು ಮಾತುಗಳನ್ನು ಹೇಳಿದ್ದು, ನಿನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನರು ನಿನ್ನನ್ನು ಪ್ರೀತಿ ಮಾಡುತ್ತಿದ್ದಾರೆ. ನೀನು ಮಾನಸಿಕವಾಗಿ ಎಷ್ಟು ಟಾರ್ಚರ್ ಅನುಭವಿಸಿದ್ದೀಯಾ ಅನ್ನೋದು ನನಗೆ ಗೊತ್ತು. ನೀನು ತಪ್ಪು ಮಾಡಿರಬಹುದು. ಈಗ ಒಂದು ಅವಕಾಶ ಸಿಕ್ಕಿದೆ. ಅಮ್ಮ ಅಂದ್ಕೊಂಡು ನನ್ನ ಬಳಿ ಹೇಳು ಎಂದು ತಾರಾ ಹೇಳಿದ್ದಾರೆ.

ಈ ವೇಳೆ ಮನದ ಮಾತು ಬಿಚ್ಚಿಟ್ಟ ಪ್ರತಾಪ್, ನನ್ನ ಅಮ್ಮ ಯಾವುದೇ ಮದುವೆ, ಮುಂಜಿಗೆ ಹೋಗಲ್ಲ. ನನ್ನಿಂದ ತಂದೆ-ತಾಯಿ ತುಂಬಾ ನೋವು ಅನುಭವಿಸಿದ್ದಾರೆ. ನಿನ್ನ ಮಗನನನ್ನು ಯಾಕೆ ಉಳಿಸಿದ್ದಿಯಾ. ಏನಾದರೂ ಹಾಕಿ ಸಾಯಿಸಿಬಿಡು ಎಂದು ಕೆಲವರು ಹೇಳಿದ್ದರು. ನಾನು ದುಡ್ಡು ಮಾಡಿದೀನಿ ಎನ್ನುವ ಆರೋಪ ಇದೆ. ಈಗ ಊರಲ್ಲಿ ಹೆತ್ತವರು ಒಂದು ಮನೆ ಕಟ್ಟಿದ್ದಾರೆ. ಅದರ ಗೃಹ ಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಿಲ್ಲ. ನನ್ನ ಹೆಸರನ್ನು ಎಲ್ಲೂ ಹೇಳಬೇಡಿ ಎಂದಿದ್ದೇನೆ. ನನ್ನ ಅಪ್ಪ, ಅಮ್ಮ, ತಂಗಿ ನಂಬರ್ ಬ್ಲಾಕ್ ಮಾಡಿದೀನಿ ಎಂದು ಹೇಳಿ ಪ್ರತಾಪ್ ಕಣ್ಣೀರು ಸುರಿಸಿದರು.

ಮದುವೆ ಆಗಬೇಕಿರೋ ತಂಗಿ ಇದಾಳೆ. ಅದಕ್ಕಾಗಿ ನಾನು ಕಂಪನಿ ಮಾಡಿದೀನಿ. ಕಂಪನಿಯನ್ನು ಬೆಳೆಸಬೇಕಿದೆ. ಡ್ರೋನ್​ ಮಾಡ್ತಾ ಇದೀಯಾ ಅದನ್ನೇ ಮಾಡ್ಕೊಂಡು ಇರು ಬಿಗ್ ಬಾಸ್​ಗೆ ಹೋಗಬೇಡ ಎಂದು ಮಾವನ ಮೂಲಕ ಮನೆಯವರು ಹೇಳಿಸಿದರು. ಆದರೆ, ನಾನು ಕೇಳಲಿಲ್ಲ. ಈಗ ಅಪ್ಪನ ನೋಡಬೇಕು ಎನಿಸುತ್ತಿದೆ ಎಂದರು ಪ್ರತಾಪ್. ಈ ವೇಳೆ ತಾರಾ ಪ್ರತಾಪ್ ಗೆ ಧೈರ್ಯ ತುಂಬಿ ಸಾಂತ್ವನ ಮಾಡಿದರು.

 

ಇದನ್ನು ಓದಿ: China Intresting Facts: ಚೀನಾ ಮಹಾಗೋಡೆ ಕುರಿತು ರೋಚಕ ಸತ್ಯ ಬಿಚ್ಚಿಟ್ಟ ಡಾ. ಬ್ರೋ !!

You may also like

Leave a Comment