Home » Drought relief: ಸದ್ಯದಲ್ಲೇ ಈ ರೈತರ ಖಾತೆಗೆ ಜಮಾ ಆಗಲಿದೆ ಬರ ಪರಿಹಾರದ ಹಣ

Drought relief: ಸದ್ಯದಲ್ಲೇ ಈ ರೈತರ ಖಾತೆಗೆ ಜಮಾ ಆಗಲಿದೆ ಬರ ಪರಿಹಾರದ ಹಣ

0 comments
Drought relief

Drought relief: ಈಗಾಗಲೇ ಕೇಂದ್ರದಿಂದ ಬರ (Drought relief) ಪರಿಶೀಲನೆ ಮಾಡಲು ರಾಜ್ಯಕ್ಕೆ ಸುಮಾರು 30 ಜನರನ್ನು ಕಳಿಸಿಕೊಟ್ಟಿದೆ. ಇದರಲ್ಲಿ ಮತ್ತೆ ಮುಖ್ಯಮಂತ್ರಿಗಳು ಅವರೊಂದಿಗೆ ಸಭೆ ನಡೆಸಿ ಮತ್ತು ಬೇರೆ ಬೇರೆ ಜನರಿಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬರ ಸಮೀಕ್ಷೆ ಮಾಡಲು ಕಳುಹಿಸಿದ್ದಾರೆ. ಯಾವ ಯಾವ ಪ್ರದೇಶಗಳಲ್ಲಿ ನಿಜವಾಗಿಯೂ ಮಳೆಯಾಗಿಲ್ಲ ಮತ್ತು ಬೆಳೆಗಳು ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ಮಾಡಿ ಕೇಂದ್ರದ ಎನ್ ಡಿ ಆರ್ ಎಫ್(NDRF) ಮಾನದಂಡಗಳನ್ನು ಪಾಲಿಸಿ ಬರ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿತ್ತು. ಸದ್ಯ ರಾಜ್ಯದಲ್ಲಿ ಬರ ಪರಿಹಾರ ನೀಡಲು ಸರ್ಕಾರದಿಂದ ಹಲವು ತಾಲೂಕುಗಳ ಹೆಸರನ್ನು ತಿಳಿಸಿದೆ. 27 ಲಕ್ಷ ರೈತರಿಗೆ ಬರ ಪರಿಹಾರದ ಹಣ ಸಿಗಲಿದ್ದು ಪರಿಹಾರ ನೀಡಲು ಸರ್ಕಾರದಿಂದ ರೈತರ ಮಾಹಿತಿಗಳನ್ನು ಪಡೆಯಲಾಗುತ್ತಿದೆ.

ಡ್ಯಾಮ ಗಳಲ್ಲಿ ಇರುವ ನೀರು ಕೂಡ ಬತ್ತಿ ಹೋಗಿದ್ದು ಕಾವೇರಿ ನೀರು ಕೂಡ ತಮಿಳುನಾಡು ಪಾಲಾಗಿದೆ. ರಾಜ್ಯದಲ್ಲಿ ಮಳೆ ಬರುವ ಸಮಯದಲ್ಲಿ ಮಳೆ ಬರದಿರುವುದರಿಂದ ರೈತರಿಗೆ ಮತ್ತಷ್ಟು ಕಷ್ಟಗಳನ್ನು ಹೆಚ್ಚಿಸಿದೆ. ಆದ್ದರಿಂದ ಸರ್ಕಾರ ರೈತರ ಬೆಳೆಹಾನಿಗೆ ನಷ್ಟ ಬರೆಸಿಕೊಡಲು ರೈತರ ಜಮೀನಿನ ಆಧಾರದ ಮೇಲೆ ಅಂದರೆ ಎಕ್ಕರೆಗೆ 9,423/- ರೂಪಾಯಿಗಳ ಬರ ಪರಿಹಾರ ನೀಡಲಿದೆ. ಈಗಾಗಲೇ ಸರ್ಕಾರ ಆದೇಶ ನೀಡಿರುವ ತಾಲೂಕುಗಳ ರೈತರ ಜಮೀನಿನ ವಿವರಗಳನ್ನು ಪಡೆದು ಸರ್ಕಾರ ಮುಂದಿನ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ನಿರ್ಧರಿಸಿದೆ.

ಪ್ರತಿಯೊಬ್ಬ ರೈತರು ಕೂಡ ಅವರ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ತಿಳಿಸಲಾಗಿದೆ. ಏಕೆಂದರೆ ಇಂತಹ ಸಮಯದಲ್ಲಿ ಅವರ ಆಧಾರ್ ಕಾರ್ಡ್ ಮೂಲಕ ಅವರ ಹೆಸರಿನಲ್ಲಿ ಎಷ್ಟು ಕೃಷಿ ಜಮೀನು ಹೊಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದು ಆ ಕೃಷಿ ಜಮೀನಿಗೆ ಇಂತಹ ಬೆಳೆ ಪರಿಹಾರ ಅಥವಾ ಬರ ಪರಿಹಾರದ ಸಮಯದಲ್ಲಿ ಆಧಾರ್ ಕಾರ್ಡ್ ಮೂಲಕ ಡಿಬಿಟಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.

ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಜಮೀನಿನ ಪಹಣಿ ಆಧಾರದ ಮೇಲೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡದಿದ್ದು ಎಕರೆಗೆ 9,423/- ರೂಪಾಯಿಗಳನ್ನು ಜಮಾ ಮಾಡುವುದಾಗಿ ತಿಳಿಸಿದೆ ಇನ್ನು ಕೆಲವು ತಾಲೂಕುಗಳಿಗೆ ಈ ಹಣ ಬದಲಾವಣೆ ಆಗಲಿದೆ ಎಂದು ಕೂಡ ಸೂಚನೆಯನ್ನು ನೀಡಲಾಗಿದೆ ಏಕೆಂದರೆ ಕೆಲವು ತಾಲೂಕುಗಳಲ್ಲಿ ಕೆಲವು ರೀತಿಯ ಬೆಳೆಗಳನ್ನು ಬೆಳೆಯಲಾಗಿದೆ ಆ ಬೆಳೆಗಳಿಗೆ ಖರ್ಚು ಕೂಡ ಹೆಚ್ಚು ಕಡಿಮೆ ಇರುತ್ತದೆ ಆದ್ದರಿಂದ ಕೆಲವು ತಾಲೂಕುಗಳ ರೈತರಿಗೆ ಬೆಳೆ ಪರಿಹಾರದಲ್ಲಿ ವ್ಯತ್ಯಾಸ ಆಗಲಿದೆ ಎಂದು ತಿಳಿಸಲಾಗಿದೆ.

 

ಇದನ್ನು ಓದಿ: Hindu Culture: ಮಹಿಳೆಯರೇ, ನೀವೇಕೆ ತೆಂಗಿನಕಾಯಿ ಒಡೆಯಬಾರದು ಗೊತ್ತಾ?! ಇಲ್ಲಿದೆ ನೋಡಿ ಕುತೂಹಲಕಾರಿ ವಿಷ್ಯ

You may also like

Leave a Comment