5
Ambulance driver: ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ ಚಾಲಕನಿಗೆ (Ambulance driver) ಶಿವಮೊಗ್ಗ ಟ್ರಾಫಿಕ್ ಪೊಲೀಸರು 13,000 ರೂ. ದಂಡ ವಿಧಿಸಿದ್ದಾರೆ.
ಶಿವಮೊಗ್ಗದ ಐಬಿ ಸರ್ಕಲ್‌ನಲ್ಲಿ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ಅಜಾಗರೂಕತೆಯಿಂದ ಚಾಲಕ ಅಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಬಂದಿದ್ದ. ತಪಾಸಣೆ ಸಮಯದಲ್ಲಿ ಚಾಲಕ ಮದ್ಯಪಾನ ಮಾಡಿ ಚಾಲನೆ ಮಾಡಿರುವುದು ಸಾಬೀತಾಗಿತ್ತು. ಬಳಿಕ ವಾಹನದ ದಾಖಲಾತಿಗಳನ್ನು ಪರಿಶೀಲಿಸಿದ ವೇಳೆ ಇನ್ಸೂರೆನ್ಸ್ ಇಲ್ಲ ಎಂಬುದು ಖಾತರಿಯಾಗಿತ್ತು. ಇದೆಲ್ಲ ಸೇರಿ ಚಾಲಕನಿಗೆ ಶಿವಮೊಗ್ಗ ನ್ಯಾಯಾಲಯ, 13,000 ರೂ. ದಂಡ ವಿಧಿಸಿದೆ.
