Kia: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಾರು ಕಂಪನಿಗಳು ತಮ್ಮ ಇಳಿಕೆಯ ಮೊತ್ತವನ್ನು ಘೋಷಿಸಿಕೊಳ್ಳುತ್ತೇವೆ. ಅಂತೆಯೇ ಇದೀಗ ಕಿಯಾ ಕಾರುಗಳ ಬೆಲೆಯಲ್ಲೂ ಭರ್ಜರಿ ಇಳಿಕೆ ಕಂಡಿದ್ದು ಕಂಪನಿ ಅದನ್ನು ಘೋಷಿಸಿಕೊಂಡಿದೆ.
ಯಸ್, ಕೇಂದ್ರ ಸರ್ಕಾರ 1200 ಸಿಸಿ ವರೆಗಿನ ಪೆಟ್ರೋಲ್, ಸಿಎನ್‌ಜಿ ಮತ್ತು 1500 ಸಿಸಿ ವರೆಗಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿರುವ ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಕಡಿತಗೊಳಿಸಿದೆ. ಕಿಯಾದ ಎಲ್ಲ ಎಸ್‌ಯುವಿ ಮತ್ತು ಎಂಪಿವಿಗಳಿಗೆ ಜಿಎಸ್‌ಟಿ ಕಡಿತದ ಪ್ರಯೋಜನ ಲಭ್ಯವಾಗಲಿದ್ದು, ಹೊಸ ಕಾರು ಖರೀದಿ ಮಾಡಬೇಕೆಂದಿರುವ ಮಧ್ಯಮ ವರ್ಗದ ಗ್ರಾಹಕರ ಸುಲಭವಾಗಿ ನನಸಾಗಲಿದೆ.
ಕಾರುಗಳ ಬೆಲೆ ಎಷ್ಟು ಇಳಿಕೆ?
ಸೋನೆಟ್ – ರೂ.1.64 ಲಕ್ಷ
ಸೈರಸ್ – ರೂ.1.86 ಲಕ್ಷ
ಸೆಲ್ಟೋಸ್ – ರೂ.75,000
ಕ್ಯಾರೆನ್ಸ್ – ರೂ.48,000
ಕ್ಯಾರೆನ್ಸ್ ಕ್ಲಾವಿಸ್ – ರೂ.78,000
ಕಾರ್ನೀವಲ್ – ರೂ.4.48 ಲಕ್ಷ
ಸದ್ಯ ಕಿಯಾ ಕಾರುಗಳ ಎಕ್ಸ್-ಶೋರೂಂ ದರ ಎಷ್ಟಿದೆ?
ಸೋನೆಟ್ – ರೂ.8 ಲಕ್ಷದಿಂದ ರೂ.15.64 ಲಕ್ಷ
ಸೈರಸ್ – ರೂ.9.50 ಲಕ್ಷದಿಂದ ರೂ.17.80 ಲಕ್ಷ
ಸೆಲ್ಟೋಸ್ – ರೂ.11.19 ಲಕ್ಷದಿಂದ ರೂ.20.56 ಲಕ್ಷ
ಕ್ಯಾರೆನ್ಸ್ – ರೂ.11.41 ಲಕ್ಷದಿಂದ ರೂ.13.26 ಲಕ್ಷ
ಕ್ಯಾರೆನ್ಸ್ ಕ್ಲಾವಿಸ್ – ರೂ.11.50 ಲಕ್ಷದಿಂದ ರೂ.21.50 ಲಕ್ಷ
ಕಾರ್ನೀವಲ್ – ರೂ.63.91 ಲಕ್ಷ
