Home » Kalburgi: ನೀಟ್‌ ಪರೀಕ್ಷೆ ವೇಳೆ ಮತ್ತೆ ಜನಿವಾರಕ್ಕೆ ಕತ್ತರಿ- ಭುಗಿಲೆದ್ದ ಆಕ್ರೋಶ

Kalburgi: ನೀಟ್‌ ಪರೀಕ್ಷೆ ವೇಳೆ ಮತ್ತೆ ಜನಿವಾರಕ್ಕೆ ಕತ್ತರಿ- ಭುಗಿಲೆದ್ದ ಆಕ್ರೋಶ

0 comments

Kalburgi: ಸಿಇಟಿ ಪರೀಕ್ಷೆ ಸಂದರ್ಭ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರವನ್ನು ಪರೀಕ್ಷಾ ಕೇಂದ್ರದಲ್ಲಿ ತೆಗೆದ ಘಟನೆ ಮಾಸುವ ಮೊದಲೇ ಇಂದು ಕಲಬುರಗಿಯಲ್ಲಿ ಜನಿವಾರ ತೆಗೆದ ಘಟನೆ ಮತ್ತೆ ನಡೆದಿದೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣದಿಂದ ಬಂದಿದ್ದ ಶ್ರೀಪಾದ್‌ ಪಾಟೀಲ್‌ ಎಂಬ ವಿದ್ಯಾರ್ಥಿಯ ಜನಿವಾರವನ್ನು ಪರೀಕ್ಷಾ ಕೇಂದ್ರ ಸಿಬ್ಬಂದಿ ತೆಗೆಸಿ ನಂತರ ಪರೀಕ್ಷೆ ಬರೆಯಲು ಅನುಮತಿ ನೀಡಿದ ಘಟನೆ ಸೆಂಟ್‌ ಮೇರಿ ಶಾಲೆಯ ಕೇಂದ್ರದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಅಲ್ಲಮ ಪ್ರಭು ಪಾಟೀಲ್‌ ಅವರು ಜನಿವಾರ ತೆಗೆಸಿದವರ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವಂತೆ ಸೂಚಿಸಿದ್ದಾರೆ.

You may also like