Home » ರ‍್ಯಾಲಿ ವೇಳೆ ಓಡಿ ಬಂದು ರಾಹುಲ್‌ ಗಾಂಧಿಗೆ ಮುತ್ತಿಟ್ಟದ್ದು ಯುವಕನಾ, ಯುವತಿಯಾ?

ರ‍್ಯಾಲಿ ವೇಳೆ ಓಡಿ ಬಂದು ರಾಹುಲ್‌ ಗಾಂಧಿಗೆ ಮುತ್ತಿಟ್ಟದ್ದು ಯುವಕನಾ, ಯುವತಿಯಾ?

by ಹೊಸಕನ್ನಡ
0 comments

‌ಪಾಟ್ನಾ: ಲೋಕ ಮತ ಕಳವು ಆರೋಪ ನಿಮಿತ್ತ ಬಿಹಾರದಲ್ಲಿ`ಮತದಾರರ ಅಧಿಕಾರ ಯಾತ್ರೆ’ ನಡೆಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ (Rahul Gandhi) ರ‍್ಯಾಲಿಯಲ್ಲಿ ಭದ್ರತಾ ಲೋಪವಾಗಿದೆ. ಇಂದು ಪೂರ್ಣಿಮಾ ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ ನಡೆಸುತ್ತಿದ್ದ ವೇಳೆ ಯುವಕನೊರ್ವ ರಾಹುಲ್ ಬಳಿ ಬಂದು ಅಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾನೆ. ಆಗ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಯುವಕನನ್ನು ಹಿಡಿದು, ಆತನ ಕಪಾಳಕ್ಕೆ ಬಾರಿಸಿದ್ದಾರೆ.

ರಾಹುಲ್ ಗಾಂಧಿಯ ಈ ಬೈಕ್ ರ‍್ಯಾಲಿಗೆ ಆರ್‌ಜೆಡಿ ನಾಯಕ ತೇಜಸ್ವಿಯಾದವ್ ರವರು ಸಾಥ್ ಕೊಟ್ಟಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಕೂಡಾ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಧಿಕಾರ ಯಾತ್ರೆಯಲ್ಲಿ ಡಿಕೆಶಿಗೆ ಜಾಗ ಇಲ್ಲ ಎಂದು ಟ್ರೋಲ್ ಮಾಡಲಾಗ್ತಿದೆ. ರಾಹುಲ್, ತೇಜಸ್ವಿ ಜೀಪ್ ಒಳಗೆ, ಜೀಪ್ ಕೆಳಗೆ ಸಾಮಾನ್ಯ ಕಾರ್ಯಕರ್ತರಂತೆ ನಿಂತಿರುವ ಡಿಕೆಶಿಯನ್ನು ಇದೀಗ ಟ್ರೋಲ್ ಮಾಡಲಾಗ್ತಿದೆ.

ಬಿಹಾರದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮಾಡುತ್ತಿದ್ದು ನಕಲಿ ಮತದಾರರು ಹೊರ ಬೀಳುತ್ತಿದ್ದಾರೆ. ಬಿಹಾರದ ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನದ ಇಬ್ಬರು ಮಹಿಳೆಯರ ಹೆಸರಿರುವುದು ಬೆಳಕಿಗೆ ಬಂದಿದೆ. 1956ರಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ಬಿಹಾರದ ಇಬ್ಬರು ಮಹಿಳೆಯರಿ ಬಿಹಾರದ ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿದ್ದರು.

You may also like