Home » February 16: ಪುತ್ತೂರಿನ ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ -ಆಮಂತ್ರಣ ಪತ್ರಿಕೆ ಬಿಡುಗಡೆ

February 16: ಪುತ್ತೂರಿನ ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ -ಆಮಂತ್ರಣ ಪತ್ರಿಕೆ ಬಿಡುಗಡೆ

by ಹೊಸಕನ್ನಡ
0 comments

Puttur : ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ ಜರಗುವ ದ್ವಾರಕೋತ್ಸವ-2025 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.5ರಂದು ಪುತ್ತೂರು ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಿತು.

ಹಿರಿಯ ನ್ಯಾಯವಾದಿ ಬೆಟ್ಟ ಗೋಪಾಲಕೃಷ್ಣ ಭಟ್ ಅವರು ,ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ,ಗೋಪಾಲಕೃಷ್ಣ ಭಟ್ ಅವರ ಕನಸಿನ ಕೂಸು ದ್ವಾರಕ ಸಂಸ್ಥೆ. ಹಂತ ಹಂತವಾಗಿ ಪರಿಶ್ರಮ ಪಟ್ಟು ದ್ವಾರಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.ಹಲವರಿಗೆ ಉದ್ಯೋಗದಾತರಾಗಿ ಹಲವು ಕುಟುಂಬವನ್ನು ಬೆಳಗಿಸಿದರು ಎಂದರು.

ದ್ವಾರಕಾ ಪ್ರತಿಷ್ಠಾನದ ಸಂಚಾಲಕ ಗಣರಾಜ್ ಕುಂಬ್ಳೆ ಶುಭಹಾರೈಸಿದರು. ಧ್ವಾರಕೋತ್ಸವದಲ್ಲಿ ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ನಡೆಯಲಿದೆ.

ವೇದಿಕೆಯಲ್ಲಿ ದ್ವಾರಕ ಕಾರ್ಪೊರೇಟ್ ಪ್ರೈ ಲಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್,ದ್ವಾರಕಾ ಕಾರ್ಪೊರೇಟ್ ಪ್ರೈ ಲಿ ನಿರ್ದೇಶಕರು ಮತ್ತು ದ್ವಾರಕಾ ಪ್ರತಿಷ್ಠಾನ ಕಾರ್ಯದರ್ಶಿಗಳಾದ ಅಮೃತ ಕೃಷ್ಣ, ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಎನ್ ಉಪಸ್ಥಿತರಿದ್ದರು.

ದುರ್ಗಾ ಗಣೇಶ್‌ ಸ್ವಾಗತಿಸಿ,ನಿರೂಪಿಸಿದರು.

You may also like