E -Swattu: ರಾಜ್ಯದ ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರು ತಮ್ಮ ಆಸ್ತಿಯ ಇ-ಖಾತಾ ಅಥವಾ ಇ-ಸ್ವತ್ತು (E-Swathu) ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ನೀವು ಈ 12 ದಾಖಲೆಗಳನ್ನು ಹೊಂದಿದ್ದರೆ ಕೇವಲ 15 ದಿನದಲ್ಲಿಯೇ ಇ ಸ್ವತ್ತು ಪಡೆಯಬಹುದಾಗಿದೆ.
ಹೌದು, ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್‌ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು ಪ್ರಕರಣ 199ಬಿ ಮತ್ತು 199ಸಿ ಸೇರಿಸಿ ಏ.7ರಂದು ಅಧಿಸೂಚನೆ ಹೊರಡಿಸಿದೆ. ಇದರನ್ವಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕ) ನಿಯಮ-2025ನ್ನು ರೂಪಿಸಿದೆ. ಈ ಮೂಲಕ ಇ -ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ.
ಇ-ಸ್ವತ್ತು ಪಡೆಯಲು ನೀಡಬೇಕಾದ ದಾಖಲಾತಿಗಳು
1 ಋಣಭಾರ ಪ್ರಮಾಣ ಪತ್ರ (ನಮೂನೆ-15)
2.ಸೇಲ್ ಡೀಡ್ / ಸ್ವತ್ತಿನ ಕಾರ್ಡ್ / ಪಿತ್ರಾರ್ಜಿತ ಆಸ್ತಿ/ ಆಸ್ತಿ ವಿಭಜನೆ / ಗಿಫ್ಟ್ ಡೀಡ್ / ವಿಲ್ / ಹಕ್ಕುಪತ್ರ / ರಿಲೀಜ್ ಡೀಡ್ / ವರ್ಗಾವಣೆ / ಸೆಟ್ಸ್‌ಮೆಂಟ್ / ನ್ಯಾಯಾಲಯದ ಆದೇಶ / ಒಟ್ಟುಗೂಡಿಸು / ವಿಭಾಗ ಪತ್ರ / ಅದಲು ಬದಲು / ಇತರೆ ನೋಂದಾಯಿತ ಪತ್ರ (ನಮೂದಿಸು)
3 ಹಕ್ಕುಪತ್ರ
4 ಭೂ ಪರಿವರ್ತಿತ ದಾಖಲಾತಿಗಳು.
5.ಅನುಮೋದಿತ ಬಡಾವಣೆ ನಕ್ಷೆ/ ಏಕನಿವೇಶನ ನಕ್ಷೆ (ಭೂ ಪರಿವರ್ತನೆಯಾದ)
6.ಕರ್ನಾಟಕ ಭೂ ಕಂದಾಯ ಕಾಯಿದೆ 164 ರ ಸೆಕ್ಷನ್ 94 ಸಿ ಅಡಿ ವಿತರಿಸಿದ ಹಕ್ಕು ಪತ್ರ
7.ಕಟ್ಟಡವಾಗಿದ್ದಲ್ಲಿ ವಿದ್ಯುತ್ ರಸೀದಿ
8.ಕಂದಯ ಪಾವತಿ ರಸೀದಿ
9.ಆಧಾರ್ ಹೊರತುಪಡಿಸಿ ಗುರುತಿನ ಚೀಟಿ(ಮತದಾರರ ಗುರುತಿನ ಚೀಟಿ ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿ)
10.ಆಸ್ತಿಯೊಂದಿಗೆ ನಿಂತು ತೆಗೆಸಿದ ಛಾಯಾಚಿತ್ರ.
11 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
12.ಪೌತಿ ಸಂಬಂಧ ಕರನಿರ್ಧರಣೆ ಪಟ್ಟಿ ಬದಲಾವಣೆಯಾಗಿದ್ದಲ್ಲಿ ವಂಶವೃಕ್ಷ ಹಾಗೂ ಮರಣ ಪ್ರಮಾಣ ಪತ್ರ
