KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು( KEA) ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿಯೊಂದನ್ನು ನೀಡಿದೆ. CET ಅರ್ಹತೆ ಪಡೆದ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಯುಜಿ ಸಿಇಟಿ-2023ರ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ, ಆನೈನ್ ಮೂಲಕ ದಾಖಲಾತಿ ಪರಿಶೀಲನೆಗೆ ದಿನಾಂಕವನ್ನು ಪ್ರಕಟಿಸಿದೆ.
ಅರ್ಹತಾ ಕಂಡಿಕೆ ‘ಎ’ ಷರತ್ತುಗಳನ್ನು ಪೂರೈಸುವ ಎಲ್ಲಾ ಅಭ್ಯರ್ಥಿಗಳು ಸೀಟು ಹಂಚಿಕೆಯ ಅರ್ಹತೆ ಪಡೆಯುವುದಕ್ಕಾಗಿ, ವ್ಯಾಸಂಗ ಮಾಡಿದ ಶಾಲೆ ಅಥವಾ ಕಾಲೇಜುಗಳಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿಗೆ ಇಂಜಿನಿಯರಿಂಗ್ ರ್ಯಾಂಕ್ ಆಧಾರದ ಮೇಲೆ ನಿಗದಿಪಡಿಸಿದ ದಿನಾಂಕಗಳಂದು ದಾಖಲಾತಿ ಪರಿಶೀಲನೆ ಮಾಡುವಂತೆ ತಿಳಿಸಿದೆ. ಕೆಇಎ ದಿನಾಂಕ 27-06-2023 ರಿಂದ 15-07-2023 ರವರೆಗೆ ಆನ್‌ಲೈನ್ ಮೂಲಕ ದಾಖಲಾತಿ ಪರಿಶೀಲನೆ ಮಾಡಲು ದಿನಾಂಕವನ್ನು ನಿಗದಿಪಡಿಸಿದೆ.

ವಿವಿಧ ವ್ಯಾಸಂಗ ಪ್ರಮಾಣ ಪತ್ರ ಪರಿಶೀಲನೆ, ಆನ್ಸೆನ್ ವಾಖಲಾತಿ ಪರಿಶೀಲನೆಯ ಬಗ್ಗೆ ಪ್ರಾಧಿಕಾರದ ವೆಸ್ಟ್ಟಿನಲ್ಲಿ ಪೋಸ್ಟ್ ಮಾಡಿರುವ ಸೂಚನೆಗಳನ್ನು ಮತ್ತು ಮಾರ್ಗದರ್ಶನಗಳನ್ನು ಅಭ್ಯರ್ಥಿಗಳು ಮತ್ತು ಪೋಷಕರು ಓದುಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.
ಆನ್‌ಲೈನ್ ಮೂಲಕ ದಾಖಲಾತಿಗೆ ವೇಳಾಪಟ್ಟಿ ಈ ಕೆಳಗಿನಂತಿದೆ
