Home » Municipal corporations elections: ಶೀಘ್ರದಲ್ಲೇ ರಾಜ್ಯದ 5 ಮಹಾನಗರ ಪಾಲಿಕೆಗೆ ಚುನಾವಣೆ: ಆಯುಕ್ತ ಜಿ.ಎಸ್.ಸಂಗ್ರೇಶಿ

Municipal corporations elections: ಶೀಘ್ರದಲ್ಲೇ ರಾಜ್ಯದ 5 ಮಹಾನಗರ ಪಾಲಿಕೆಗೆ ಚುನಾವಣೆ: ಆಯುಕ್ತ ಜಿ.ಎಸ್.ಸಂಗ್ರೇಶಿ

0 comments

Municipal corporations elections: ರಾಜ್ಯದ ಐದು ಮಹಾ ನಗರ ಪಾಲಿಕೆಗಳ ಚುನಾವಣೆ(election) ಶೀಘ್ರದಲ್ಲೆ ನಡೆಯಲಿದೆ. ಈ ವರ್ಷದಲ್ಲೇ ರಾಜ್ಯದ ಐದು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುತ್ತೇವೆ ಎಂದು ಮೈಸೂರಿನಲ್ಲಿ ರಾಜ್ಯ ಚುನಾವಣಾ ಆಯೋಗದ(Election Commission) ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.

“ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟರೆ ಸರಿ, ಕೊಡದಿದ್ದರೆ ಹೈಕೋರ್ಟ್ ಮೊರೆ ಹೋಗಿ ಹಳೆ ಮೀಸಲಾತಿಯಂತೆ ಈ ವರ್ಷವೇ ಚುನಾವಣೆ ಮಾಡುತ್ತೇವೆ. ಈ ಬಗ್ಗೆ ಸರ್ಕಾರಕ್ಕೆ ಮಹಾನಗರ ಪಾಲಿಕೆಗಳ ಮೀಸಲಾತಿ ಕೊಡುವಂತೆ ಪತ್ರ ಕೂಡ ಬರೆಯಲಾಗಿದೆ. ಐದು ಮಹಾನಗರ ಪಾಲಿಕೆಯಲ್ಲೂ ಮತದಾರರ ಪಟ್ಟಿ ಸಿದ್ಧವಾಗಿದೆ” ಎಂದರು. ಮೈಸೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಮಂಗಳೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ನಡೆದಿದೆ ಎಂದರು.

You may also like