Home » ಕಾಡಾನೆಯನ್ನು ಓಡಿಸಲು ಗುಂಡು ಹಾರಾಟ : ಗುರಿ ತಪ್ಪಿ ಅರಣ್ಯ ಇಲಾಖೆ ಸಿಬ್ಬಂದಿಯ ಕಾಲಿಗೆ ಗುಂಡು, ಗಂಭೀರ

ಕಾಡಾನೆಯನ್ನು ಓಡಿಸಲು ಗುಂಡು ಹಾರಾಟ : ಗುರಿ ತಪ್ಪಿ ಅರಣ್ಯ ಇಲಾಖೆ ಸಿಬ್ಬಂದಿಯ ಕಾಲಿಗೆ ಗುಂಡು, ಗಂಭೀರ

by Praveen Chennavara
0 comments

ಚಿಕ್ಕಮಗಳೂರು : ಕಾಡಾನೆಯನ್ನು ಕಾಡಿಗೆ ಓಡಿಸುವ ಭರದಲ್ಲಿ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ಇನ್ನೋರ್ವ ಸಿಬ್ಬಂದಿಯ ಕಾಲಿಗೆ ತಗುಲಿ ಗಂಭೀರ ಗಾಯಗೊಂಡ ಘಟನೆ ಚುರ್ಚೆಗುಡ್ಡ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ನಾಗರಹೊಳೆಯ ಅರಣ್ಯ ಸಿಬ್ಬಂದಿ ಯೋಗೇಶಪ್ಪ ಗಂಭೀರ ಗಾಯಗೊಂಡವರು, ಅವರನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುರ್ಚೆಗುಡ್ಡ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಒಂಟಿ ಸಲಗವನ್ನು ಕಾಡಿಗಟ್ಟಲು ಅರಣ್ಯ ಸಿಬಂದಿಗಳು ನಾಗರಹೊಳೆಯಿಂದ ಅರ್ಜುನ ಮತ್ತು ಭೀಮಾ ಆನೆಯನ್ನು ಕರೆತಂದಿದ್ದರು ಈ ವೇಳೆ ಒಂಟಿ ಸಲಗ ಅಧಿಕಾರಿಗಳ ಮೇಲೆ ದಾಳಿಗೆ ಮುಂದಾಗಿದೆ ಈ ಸಂದರ್ಭ ಆನೆಯನ್ನು ಹೆದರಿಸಲು ಅರಣ್ಯ ಸಿಬಂದಿ ಗುಂಡು ಹಾರಿಸಿದ್ದಾರೆ ಆದರೆ ಬಂದೂಕಿನಿಂದ ಹಾರಿದ ಗುಂಡು ಎದುರಿಗೆ ಇದ್ದ ಯೋಗೇಶಪ್ಪ ಅವರ ಕಾಲಿಗೆ ತಗುಲಿ ಗಂಭೀರ ಗಾಯಗೊಂಡಿದ್ದಾರೆ.

ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment