Shruti Haasan: ಕಮಲ ಹಾಸನ್ (Kamala hassan) ಮಗಳು ಶ್ರುತಿ ಹಾಸನ್ (shruti haasan) ಒಂಥರಾ ಡಿಫರೆಂಟ್ ಹುಡುಗಿ. ಇದೀಗ ನನ್ ಬಾಯ್ ಫ್ರೆಂಡ್ ಹೂಸು ನಂಗಿಷ್ಟ ಅನ್ನೋ ಮೂಲಕ ನೆಟ್ಟಿಗರ ಕೋಪಕ್ಕೆ ಸಿಲುಕಿದ್ದಾಳೆ.
ಶ್ರುತಿ ಹಾಸನ್ (shruti haasan) ತನ್ನ ವೈಯುಕ್ತಿಕ ಬದುಕಿನ ಕೊಂಚ ಅತಿಯಾಗೇ ಆಡ್ತಾರೆ. ಈ ಬೆಕ್ಕಿನ ಕಣ್ಣಿನ ಸುಂದರಿ ಮಾತು ಕೇಳಿ ಕೆಲವರು ನಕ್ಕಿದ್ದು ಇದೆ, ಇನ್ನು ಕೆಲವರು ವ್ಯಂಗ್ಯವಾಡಿದ್ದು ಇದೆ.
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಸಿನಿಮಾ ಜೊತೆಗೆ ಬಾಯ್‌ಫ್ರೆಂಡ್ ವಿಚಾರದಲ್ಲೂ ಅಷ್ಟೇ ಸುದ್ದಿಯಲ್ಲಿ ಇರುತ್ತಾರೆ. ಬಾಯ್ ಫ್ರೆಂಡ್ ವಿಚಾರದಲ್ಲಿ ಈಕೆ ಈಕೆ ಎಲ್ಲವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾಳೆ. ಶ್ರುತಿ ಹಾಸನ್ ಹಾಗೂ ಬಾಯ್‌ಫ್ರೆಂಡ್ ಶಾಂತನು ಹಜಾರಿಕಾ ಇಬ್ಬರೂ ಫುಲ್ ಬಿಂದಾಸ್ ಕೂಡ.
2018ರಲ್ಲಿ ಶ್ರುತಿ ಹಾಸನ್ ಶಂತನು ಹಜಾರಿಕಾ ಅವರನ್ನು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿದಾಗ ಮೊದಲು ಪ್ರಪೋಸ್ ಮಾಡಿದ್ದು ಕೂಡ ಇವರೇ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಶ್ರುತಿ ಹಾಸನ್ ಆಗಾಗ ತನ್ನ ಬಾಯ್‌ಫ್ರೆಂಡ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಸದ್ಯಕ್ಕೀಗ ಶ್ರುತಿ ಹಾಸನ್ ತನ್ನ ಬಾಯ್‌ಫ್ರೆಂಡ್ ಬಗ್ಗೆ ಏನು ಇಷ್ಟ ಅನ್ನೋದನ್ನು ಶೇರ್ ಮಾಡಿಕೊಂಡಿದ್ದಾರೆ. ಈಕೆ ಹಿಂದೆ ತನ್ನ ಪ್ರಿಯತಮನ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆ, ಪ್ರತಿಭೆ, ಪ್ರೀತಿ (Love), ಕಾಳಜಿ (Caring) ಬಗ್ಗೆ ಮನ ಬಿಚ್ಚಿ ಮಾತಾಡಿದ್ದರು. ಇವೆಲ್ಲವೂ ಇಷ್ಟ ಅಂತ ಹೇಳಿದ್ದರು. ಇಷ್ಟೇ ಹೇಳಿದ್ದರೆ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ತನ್ನ ಬಾಯ್‌ಫ್ರೆಂಡ್ (Boyfriend) ಹೂಸು ತನಗೆ ಇಷ್ಟ ಅಂದಿದ್ದು. ತೀರಾ ಈ ಲೆವೆಲ್‌ಗೆ ಇಳಿದು ಮಾತಾಡಬೇಕಾ ಅಂತ ನೆಟ್ಟಿಗರು ಕಮಲ್ ಮಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ಸಲಾರ್‌ನಂಥ ಸಿನಿಮಾದಲ್ಲಿ ನಟಿಸುತ್ತಿದ್ದೀಯ. ಕಮಲ್ ಹಾಸನ್ ನಟನ ಮಗಳು ನೀನು. ನಿನಗೆ ಹೀಗೆ ಚೀಪ್ ಆಗಿ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಹಾಕಿ ಉಗಿಸಿಕೊಳ್ಳೋ ಬುದ್ಧಿ ಆದರೂ ಎಲ್ಲಿಂದ ಬಂತು ಅಂತ ಕಿಡಿ ಕಾರಿದ್ದಾರೆ.
ಸದ್ಯಕ್ಕೀಗ ಶ್ರುತಿ ಹಾಸನ್ ಫುಲ್ ಬ್ಯುಸಿ,ಶ್ರುತಿ ಹಾಸನ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಂಡಿದ್ದಾಳೆ.
