Meenakshi Chaudhary: ಹರಿಯಾಣದ ಚೆಲುವೆ ಮೀನಾಕ್ಷಿ ಚೌಧರಿ (Meenakshi Chaudhary)ಅವರು ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ(Tollywood)ಭಾರೀ ಬೇಡಿಕೆಯಲ್ಲಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಇಚ್ಛಾ ವಾಹನಮುಲು ಅತಿರದಾಡು ಚಿತ್ರದ ಮೂಲಕ ತೆಲುಗಿಗೆ ಮೀನಾಕ್ಷಿ ಚೌಧರಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಕಿರುತೆರೆಯಲ್ಲಿ ಮಿಂಚಿದ್ದ ಚೆಲುವೆ ಇದೀಗ, ಫೋಟೋ ಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಮಹೇಶ್ ಬಾಬು(Actor Mahesh Babu)ಅಭಿನಯದ ‘ಗುಂಟೂರು ಖಾರಂ’ ಚಿತ್ರದಲ್ಲಿ(Guntur Karam Movie) ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡ ನಟಿ ಮೀನಾಕ್ಷಿ ಅವರಿಗೆ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್ ತೆಲುಗಿನಲ್ಲಿ ಲಕ್ಕಿ ಭಾಸ್ಕರ್ ಎಂಬ ಸಿನಿಮಾದಲ್ಲಿ ನಟಿಸೋದಕ್ಕೆ ಅವಕಾಶ ಸಿಕ್ಕಿದೆಯಂತೆ. ಇದೀಗ, ನಟಿ ಈಗ ಸುಂದರವಾದ ಮೀನಿನ ಬಲೆಯಂಥಾ ಸೀರೆ ಉಟ್ಟು ಪೋಸ್ ನೀಡಿದ್ದು, ನೋಡುಗರ ಕಣ್ಮನ ಸೆಳೆದಿರುವುದು ಸುಳ್ಳಲ್ಲ.

ಸದ್ಯ ತೆಲುಗಿನಲ್ಲಿ ಸತತ ಸಿನಿಮಾ ಮಾಡುತ್ತಿರುವ ಚೆಲುವೆ ಮೀನಾಕ್ಷಿ ಚೌಧರಿ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಅವರ ಗುಂಟೂರ್ ಖಾರಂ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.ಈ ಸಿನಿಮಾದ ಶೂಟಿಂಗ್ ನವೆಂಬರ್‌ನಲ್ಲಿ ಆರಂಭವಾಗಲಿದ್ದು, ನಟಿ ಸೋಲೋ ಸಾಂಗ್ ಶೂಟ್ ಮಾಡುತ್ತಿದ್ದಾರಂತೆ. ಈ ಹಾಡು ತುಂಬಾ ಅದ್ಧೂರಿಯಾಗಿ ನಡೆಯಲಿದ್ದು, ಈ ಹಾಡಿನ ಬಳಿಕ ಮನೆಯಲ್ಲೇ ದೃಶ್ಯಗಳ ಚಿತ್ರೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಶೆಡ್ಯೂಲ್ ನಲ್ಲಿ ನಾಯಕನ ಜೊತೆಗೆ ನಾಯಕಿಯರಾದ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಕೂಡ ತೆರೆ ಮೇಲೆ ಮಿಂಚಲಿದ್ದಾರೆ ಎನ್ನಲಾಗಿದೆ. ಈ ನಡುವೆ, ನಟಿ ಮೀನಾಕ್ಷಿ ಚೌಧರಿ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ: Honour Killing: ಅನ್ಯಜಾತಿ ಯುವಕನ ಜೊತೆ ಪ್ರೀತಿ! ಮಗಳ ಕತ್ತು ಕೊಯ್ದು ಕೊಂದೇ ಬಿಟ್ಟ ತಂದೆ!!!
