Home » Kerala: 1 ನೇ ತರಗತಿಗೆ ʼಪ್ರವೇಶ ಪರೀಕ್ಷೆʼ ಬ್ಯಾನ್‌

Kerala: 1 ನೇ ತರಗತಿಗೆ ʼಪ್ರವೇಶ ಪರೀಕ್ಷೆʼ ಬ್ಯಾನ್‌

0 comments

Kerala: ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ಶಾಲೆಗಳ ಕ್ರಮವನ್ನು “ಮಕ್ಕಳ ಮೇಲಿನ ದೌರ್ಜನ್ಯ” ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ಖಂಡಿಸಿದ್ದಾರೆ. ರಾಜ್ಯದಲ್ಲಿ ಇಂಥಹ ಪ್ರವೇಶ ಪರೀಕ್ಷೆ ನಡೆಸುವುದನ್ನು ನಿಷೇಧ ಮಾಡಲಾಗಿದೆ ಎಂದು ಅವರು ಘೋಷಿಸಿದ್ದಾರೆ.

“ಒತ್ತಡ ಮುಕ್ತ ಕಲಿಕೆ ಇಂದು ಅತ್ಯಗತ್ಯ. ಒಂದನೇ ತರಗತಿಗೆ ಪ್ರವೇಶ ಪರೀಕ್ಷೆ ಮತ್ತು ಪೋಷಕರ ಸಂದರ್ಶನಗಳನ್ನು ನಡೆಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಲಾ ಮಂಡಳಿಗಳು ವ್ಯಾಪಾರಿ ದೃಷ್ಟಿಕೋನ ಬಿಡಬೇಕು ಎಂದು ಹೇಳಿದ್ದಾರೆ. ಒಂದನೇ ತರಗತಿಗೆ ಮಗುವಿನ ಪ್ರವೇಶ ನಿರಾಕರಿಸುವುದು ಸಂವಿಧಾನ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘಟನೆಯಾಗಲಿದೆ ಎಂದು ಅವರು ಹೇಳಿದ್ದಾರೆ.

You may also like